ನವದೆಹಲಿ: ಕೈಗಾರಿಕೋದ್ಯಮಿ ಮುಕೇಶ್ ಅಂಬಾನಿ ( Mukesh Ambani Driver ) ವಿಶ್ವದ ಶ್ರೀಮಂತರಲ್ಲಿ ಒಬ್ಬರು. ರಿಲಯನ್ಸ್ ಇಂಡಸ್ಟ್ರೀಸ್, ದಂತಕಥೆ ಉದ್ಯಮಿ ಎಂದು ಎಲ್ಲರಿಗೂ ತಿಳಿದಿದೆ. ಲಕ್ಷ ಕೋಟಿ ಆಸ್ತಿ ಹೊಂದಿರುವ ಅಂಬಾನಿ ಮನೆಯಲ್ಲಿರುವ ಕೆಲಸಗಾರರಿಗೂ ಭಾರಿ ಸಂಬಳವಿದೆ ಎಂಬ ಹಲವು ಸುದ್ದಿಗಳೂ ಬೆಳಕಿಗೆ ಬಂದಿದ್ದವು.
ಈಗ ಅಂಬಾನಿ ಚಾಲಕನ ಸಂಭಾವನೆ ಚರ್ಚೆಗೆ ಗ್ರಾಸವಾಗಿದೆ. ಅಂಬಾನಿ ಬಳಿ ಡ್ರೈವರ್ ಉದ್ಯೋಗದ ಸಂಬಳ ಎಷ್ಟು ಎಂಬುದು ಅನೇಕರಿಗೆ ತಿಳಿದಿಲ್ಲ. ಆದರೆ, 2017ರ ಮಾಹಿತಿ ಪ್ರಕಾರ ಮುಖೇಶ್ ಅಂಬಾನಿ ಅವರ ವೈಯಕ್ತಿಕ ಚಾಲಕನ ವೇತನ ತಿಂಗಳಿಗೆ 2 ಲಕ್ಷ ರೂ. ಅಂದರೆ, ವರ್ಷಕ್ಕೆ ರೂ.24 ಲಕ್ಷದವರೆಗೆ ಇರುತ್ತದೆ. ಅವರಿಗೆ ಸಂಬಳದ ಹೊರತಾಗಿ ಇತರ ಭತ್ಯೆಗಳೂ ಇವೆ. ಈ ಸುದ್ದಿ 2017ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಅದು ಏಳು ವರ್ಷಗಳ ಹಿಂದೆ. ಸದ್ಯ ಅಂಬಾನಿ ಬಳಿ ಕೆಲಸ ಮಾಡುತ್ತಿರುವ ಚಾಲಕನ ಸಂಬಳ ಈಗ ದುಪ್ಪಟ್ಟಾಗಲಿರಲಿದೆಯಂತೆ.
ಅನೇಕ ಸೆಲೆಬ್ರಿಟಿಗಳ ಮನೆಗಳಲ್ಲಿ ಕೆಲಸ ಮಾಡುವ ಚಾಲಕರ ಸಂಬಳವು ದೊಡ್ಡದಾಗಿದೆ. ಏಕೆಂದರೆ ಐಷಾರಾಮಿ ಮತ್ತು ಬುಲೆಟ್ ಪ್ರೂಫ್ ವಾಹನಗಳನ್ನು ಓಡಿಸುವುದರ ಹೊರತಾಗಿ, ಅವರು ತಮ್ಮ ತಂತ್ರಜ್ಞಾನ ಮತ್ತು ನಿರ್ವಹಣೆಯ ಸಂಪೂರ್ಣ ಜ್ಞಾನವನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಇಂತಹ ವೃತ್ತಿಪರ ಚಾಲಕರನ್ನು ಖಾಸಗಿ ಗುತ್ತಿಗೆ ಏಜೆನ್ಸಿಗಳು ನೇಮಿಸಿಕೊಳ್ಳುತ್ತವೆ. ಆ ಏಜೆನ್ಸಿಗಳು ಅವರಿಗೆ ತರಬೇತಿಯನ್ನೂ ನೀಡುತ್ತವೆ.