ಚೆನ್ನೈ: ನಟಿ ನಯನತಾರಾ ಅವಳಿ ಮಕ್ಕಳ ತಾಯಿ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಇವರ ಅವಳಿ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಆದರೆ ಇದೆ ಮೊದಲ ಬಾರಿಗೆ ಮಕ್ಕಳ ಪೂರ್ಣ ಹೆಸರನ್ನು ಬಹಿರಂಗ ಪಡಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರು ಅವಳಿ ಗಂಡು ಮಕ್ಕಳನ್ನು ಪಡೆದರು. ಉಯಿರ್ ಮತ್ತು ಉಳಗಂ ಎಂದು ಅವರು ಮಕ್ಕಳಿಗೆ ಹೆಸರು ಇಟ್ಟಿದ್ದಾರೆ. ಆದರೆ ಮುದ್ದು ಮಕ್ಕಳ ಪೂರ್ತಿ ಹೆಸರು ಏನು ಎಂಬುದನ್ನು ಅವರು ಇಷ್ಟು ದಿನಗಳ ಕಾಲ ಬಹಿರಂಗಪಡಿಸಿರಲಿಲ್ಲ. ಈಗ ಖಾಸಗಿ ಕಾರ್ಯಕ್ರಮದ ವೇದಿಕೆಯಲ್ಲಿ ಅವರು ಮಕ್ಕಳ ಪೂರ್ಣ ಹೆಸರು ಏನು ಎಂಬುದನ್ನು ತಿಳಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?: ನಯನತಾರಾ ಅವರು ಇತ್ತೀಚೆಗೆ ಚೆನ್ನೈನಲ್ಲಿ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ . ಮಕ್ಕಳ ಪೂರ್ಣ ಹೆಸರು ಏನು ಎಂದು ಕೇಳಲಾಯಿತು. ಆಗ ಅವರು, ‘ನನ್ನ ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಹಾಗೂ ನನ್ನ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್’ ಎಂದು ಹೇಳಿದ್ದಾರೆ.