ನ್ಯೂಸ್

ದೈತ್ಯಗಾತ್ರದ ಅಳಿಲು ಭಾರತದಲ್ಲಿ ಪತ್ತೆ! ಫೋಟೋ ಶೇರ್ ಮಾಡಿದ ಐಎಫ್‌ಎಸ್ ಅಧಿಕಾರಿ

ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿನ ಆಚಾರ ವಿಚಾರ ಭಾಷೆ ಪ್ರಾದೇಶಿಕ ವೈವಿಧ್ಯತೆ ಮಾತ್ರವಲ್ಲ, ಇಲ್ಲಿರುವ ಜೀವ ವೈವಿಧ್ಯ, ವನ್ಯಜೀವಿಗಳು ಕೂಡ ಬಹಳ ವೈವಿಧ್ಯತೆಯನ್ನು ಹೊಂದಿವೆ.


ನಮ್ಮ ವನ್ಯಜೀವಿ ವೈವಿಧ್ಯದ ಮತ್ತೊಂದು ಅಪರೂಪದ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್‌ ಅವರು ಈ ದೈತ್ಯಗಾತ್ರದ ಅಳಿಲಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಪರ್ವೀನ್ ಕಸ್ವಾನ್‌ ಅವರು ಈ ದೈತ್ಯಗಾತ್ರದ ಅಳಿಲಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ದೈತ್ಯ ಗಾತ್ರದ ಅಳಿಲು ಪಶ್ಚಿಮ ಬಂಗಾಳದ ಬುಕ್ಸಾದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ನೀವು ಗುರುತಿಸಬಲ್ಲಿರಾ ಎಂದು ಅವರು ಕೇಳಿದ್ದಾರೆ.


ಇದು ಮಲಯನ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವರು ತಾವು ಕ್ಯಾಮರಾದಲ್ಲಿ ಸೆರೆ ಹಿಡಿದ ಇಂತಹದ್ದೇ ದೈತ್ಯ ಅಳಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಸೆರೆಯಾಗಿರುವ ಫೋಟೋದಲ್ಲಿ ಈ ದೈತ್ಯ ಗಾತ್ರದ ಅಳಿಲು ಮರದ ಕಾಂಡವನ್ನೇರಿ ನಿಂತಿದೆ.


ದೈತ್ಯ ಅಳಿಲಿನ ಫೋಟೋ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದು, ಅನೇಕರು ಇದು ಮಲಬಾರ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ಮಲಯನ್ ದೈತ್ಯ ಅಳಿಲು ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೆಲವರು ತಾವು ಕ್ಯಾಮರಾದಲ್ಲಿ ಸೆರೆ ಹಿಡಿದ ಇಂತಹದ್ದೇ ದೈತ್ಯ ಅಳಿಲಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.