ನ್ಯೂಸ್

ಇಂತಹ ವ್ಯಕ್ತಿಗಳು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣು ತಿನ್ನಬಾರದಂತೆ! ಏಕೆ ಗೊತ್ತಾ? | Banana

Banana: ಪ್ರತಿದಿನ ಬಾಳೆ ಹಣ್ಣು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಾಳೆ ಹಣ್ಣು ಪೋಟ್ಯಾಸಿಯಮ್, ಕ್ಯಾಲ್ಸಿಯಮ್​ನಂತಹ ಪೋಷಕಾಂಶಗಳಿಂದ ಕೂಡಿದೆ. ಆದಾಗ್ಯೂ ಬಾಳೆ ಹಣ್ಣನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಸೂಕ್ತವಲ್ಲ ಎಂದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.

ಖಾಲಿ ಹೊಟ್ಟೆಯಲ್ಲಿ ಒಂದೇ ಬಾರಿಗೆ ಎರಡು ಅಥವಾ ಹೆಚ್ಚಿನ ಬಾಳೆಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಮಿತವಾಗಿರುವುದು ಮುಖ್ಯ. ಒಂದು ಬಾಳೆಹಣ್ಣಿನಲ್ಲಿ ಸುಮಾರು 14 ಗ್ರಾಂ ಸಕ್ಕರೆ ಇರುತ್ತದೆ. ಒಂದಕ್ಕಿಂತ ಹೆಚ್ಚು ತಿನ್ನುವುದರಿಂದ ಅತಿಯಾದ ಸಕ್ಕರೆ ಪ್ರಮಾಣ ಉಂಟಾಗುತ್ತದೆ. ವಿಶೇಷವಾಗಿ ಇನ್ಸುಲಿನ್ ತೆಗೆದುಕೊಳ್ಳುವ ಜನರಿಗೆ(ಮಧುಮೇಹ ಇರುವ ವ್ಯಕ್ತಿಗಳು) ಬಾಳೆಹಣ್ಣು ಸೂಕ್ತವಲ್ಲ.

ರಕ್ತದಲ್ಲಿನ ಸಕ್ಕರೆಯ ಏರಿಕೆ ಮತ್ತು ಕುಸಿತ

ವಿಶೇಷವಾಗಿ ಮಾಗಿದ ಬಾಳೆಹಣ್ಣು ನೈಸರ್ಗಿಕವಾಗಿ  ಹೆಚ್ಚಿನ ಗ್ಲೈಸೆಮಿಕ್ (ಗ್ಲೂಕೋಸ್, ಫ್ರಕ್ಟೋಸ್ ಮತ್ತು ಸುಕ್ರೋಸ್) ಸೂಚಿಯನ್ನು ಹೊಂದಿರುತ್ತವೆ. ಖಾಲಿ ಹೊಟ್ಟೆಯಲ್ಲಿ ತಿಂದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ತ್ವರಿತ ಏರಿಕೆಗೆ ಕಾರಣವಾಗಬಹುದು. ಅಲ್ಲದೆ, ಹಠಾತ್ ಕುಸಿತಕ್ಕೂ ಕಾರಣವಾಗಬಹುದು.

ಬಾಳೆಹಣ್ಣು ಸಿಟ್ರಿಕ್ ಮತ್ತು ಮಾಲಿಕ್ ಆಮ್ಲವನ್ನು ಹೊಂದಿರುತ್ತವೆ. ಸ್ನಾಯುಗಳು ಮತ್ತು ನರಗಳ ಕಾರ್ಯಕ್ಕೆ ಬೇಕಾದ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮೂತ್ರ ಪಿಂಡದ ಸಮಸ್ಯೆ, ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೂ ತೊಂದರೆಯಾಗಬಹುದು.

ಜೀರ್ಣಕ್ರಿಯೆಯಲ್ಲಿ ತೊಂದರೆ

ಹೆಚ್ಚು ಬಲಿಯದ ಬಾಳೆ ಹಣ್ಣು ತಿನ್ನುವುರಿಂದ ಜೀರ್ಣಕ್ರಿಯೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಲವರಿಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುವುದರಿಂದ ಅದರ ನಾರಿನ ಅಂಶದಿಂದಾಗಿ ಉಬ್ಬುವುದು, ವಾಕರಿಕೆ ಅಥವಾ ಹೊಟ್ಟೆಯಲ್ಲಿ ಸ್ವಲ್ಪ ಅಸ್ವಸ್ಥತೆ ಉಂಟಾಗುತ್ತದೆ.

ಯಾವ ರೀತಿಯಲ್ಲಿ ಬಾಳೆಹಣ್ಣು ತಿನ್ನಬಹುದು?

ನೀವು ಪ್ರತಿದಿನ ಬೆಳಿಗ್ಗೆ ಬಾಳೆಹಣ್ಣು ತಿನ್ನಲು ಇಷ್ಟಪಡುವವರಾಗಿದ್ದರೆ ಮೊಸರು ಅಥವಾ ಓಟ್ಸ್‌ನೊಂದಿಗೆ ಸೇರಿಸಿ ತಿನ್ನಬಹುದು. ಇದು ರಕ್ತದಲ್ಲಿನ ಸಕ್ಕರೆ  ಅಂಶವನ್ನ ಸಮತೋಲನಗೊಳಿಸುತ್ತದೆ. ಹೆಚ್ಚು ಸಮಯ ಹಸಿವನ್ನು ತಡೆಯುತ್ತದೆ. ದೇಹಕ್ಕೆ ಆಯಾಸವಾಗದಂತೆ ನೋಡಿಕೊಳ್ಳುತ್ತದೆ. ಪ್ರತಿ ಊಟಕ್ಕೆ ಒಂದು ಬಾಳೆಹಣ್ಣು ಸೇವಿಸಿದ್ರೆ ಸಾಕು. ಕ್ರೀಡಾಪಟುವಾಗಿದ್ರೆ ಹೆಚ್ಚಿನದಾಗಿ ಇತರೆ ಆಹಾರಗಳೊಂದಿಗೆ ಸೇವಿಸಬಹುದು.

ಯಾವ ವಿಧದ ಬಾಳೆಹಣ್ಣು ಉತ್ತಮ?

ಬಾಳೆಹಣ್ಣಿನಲ್ಲಿ ಹಲವು ವಿಧಗಳಿವೆ, ಸರಿಯಾದದ್ದನ್ನು ಆರಿಸುವುದು ಮುಖ್ಯ.

ಮಾಗಿದ ಬಾಳೆಹಣ್ಣು (ಹಳದಿ ಬಣ್ಣದ ಚುಕ್ಕೆಯೊಂದಿದ): ಇದು ಸಿಹಿಯಾಗಿರುತ್ತದೆ, ಜೀರ್ಣಿಸಿಕೊಳ್ಳಲು ಸುಲಭ. ಹೆಚ್ಚು ರೋಗನಿರೋಧಕ ಶಕ್ತಿಯನ್ನ ಹೊಂದಿರುತ್ತದೆ. ಆದ್ರೆ ಬೇಗನೆ ಸಕ್ಕರೆ ಪ್ರಮಾಣ ಹೆಚ್ಚಿಸಬಹದು.

ಬಲಿಯದ ಬಾಳೆಹಣ್ಣು(ಹಸಿರು-ಹಳದಿ): ಇದರಲ್ಲಿ ರೋಗನಿರೋಧಕ ಜಾಸ್ತಿ ಇರುತ್ತೆ, ಆದ್ರೆ ನಿಧಾನವಾಗಿ ಜೀರ್ಣಕ್ರಿಯೆ ಆಗುತ್ತದೆ. ಮಧುಮೇಹಿ ಖಾಯಿಲೆಯಿದ್ದರಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಕೆಂಪು ಬಾಳೆಹಣ್ಣು : ಹೆಚ್ಚು ರೋಗನಿರೋಧಕ ಶಕ್ತಿ ಹೊಂದಿರುತ್ತದೆ. ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ, ಕರುಳಿನ ಆರೋಗ್ಯಕ್ಕೆ ಉತ್ತಮ ಆಯ್ಕೆ.

ಏಲಕ್ಕಿ ಬಾಳೆಹಣ್ಣು : ಈ ಸಮತೋಲಿತ ಅಂಶವನ್ನ ಹೊಂದಿರುತ್ತದೆ. ಜೀರ್ಣಕ್ರಿಯೆಗೆ ಉತ್ತಮ. ಆಯುರ್ವೇದದಲ್ಲಿ ಹೆಚ್ಚಾಗಿ ಶಿಫಾರಸು ಮಾಡ್ತಾರೆ. ಇವು ಸಮತೋಲಿತ ಸಕ್ಕರೆ ಅಂಶ ಅನ್ನು ಹೊಂದಿರುತ್ತವೆ ಮತ್ತು ಉತ್ತಮ ಜೀರ್ಣಕ್ರಿಯೆಗಾಗಿ ಆಯುರ್ವೇದದಲ್ಲಿ ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ.

ನಿಮಗೆ ಮಧುಮೇಹ ಅಥವಾ ಇನ್ಸುಲಿನ್ ಪಡೆಯುತ್ತಿದ್ರೆ ಬಲಿಯದ ಅಥವಾ ಅರೆ ಮಾಗಿದ ಬಾಳೆಹಣ್ಣುಗಳನ್ನು ಆರಿಸಿಕೊಳ್ಳುವುದು ಉತ್ತಮ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.