Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ನಕಾರಾತ್ಮಕತೆಯನ್ನು ವರ್ಗಾಯಿಸುತ್ತವೆ. ಇದು ದುರಾದೃಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ ಕೆಲವು ವಸ್ತುಗಳನ್ನು ಉಚಿತವಾಗಿ ಯಾರೇ ನೀಡಿದರೂ ಕೂಡಾ ನೀವು ತೆಗೆದುಕೊಳ್ಳದಿರುವುದು ಉತ್ತಮ ಎಂದು ಹೇಳಲಾಗುತ್ತದೆ. ಅದು ಯಾವ ವಸ್ತುಗಳು ಎನ್ನುವ ಪ್ರಶ್ನೆ ನಿಮಗೆ ಬಂದಿರಬಹುದು ಈ ಕುರಿತಾಗಿ ತಿಳಿದುಕೊಳ್ಳೋಣ...
ಪಾದರಕ್ಷೆಗಳು ಅಥವಾ ಬೂಟುಗಳನ್ನು ಬೇರೆಯವರ ಜತೆ ಹಂಚಿಕೊಳ್ಳುವುದು ನಿಮಗೆ ಸಮಸ್ಯೆಗಾಬಹುದು. ನಂಬಿಕೆಗಳ ಪ್ರಕಾರ, ನೀವು ಬೇರೆಯವರ ಶೂ ಅಥವಾ ಸ್ಯಾಂಡಲ್ ಧರಿಸಿದರೆ, ಆ ವ್ಯಕ್ತಿಯ ತೊಂದರೆಗಳು ನಿಮ್ಮ ಮೇಲೂ ಪರಿಣಾಮ ಬೀರುತ್ತವೆ.
ಪೆನ್ನು ಜ್ಞಾನಕ್ಕೆ ಸಂಬಂಧಿಸಿದ ವಿಷಯ... ಅದನ್ನು ಯಾರಿಗಾದರೂ ನೀಡುವುದರಿಂದ ವೃತ್ತಿಪರವಾಗಿ ನಿಮಗೆ ಸಮಸ್ಯೆಗಳು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಇದನ್ನು ಇತರರೊಂದಿಗೆ ಹಂಚಿಕೊಳ್ಳದಿರುವುದು ಉತ್ತಮ.
ನೀವು ಬೇರೆಯವರ ಉಂಗುರವನ್ನು ಧರಿಸಬಾರದು. ಪ್ರತಿಯೊಂದು ರತ್ನ ಮತ್ತು ಲೋಹವು ತನ್ನದೇ ಆದ ಮಹತ್ವವನ್ನು ಹೊಂದಿದ್ದು, ಅದು ವ್ಯಕ್ತಿಯ ಗ್ರಹಗಳು ಮತ್ತು ನಕ್ಷತ್ರಗಳಿಗೆ ಸಂಬಂಧಿಸಿದೆ. ಬೇರೆಯವರ ಗಡಿಯಾರ ಧರಿಸುವುದರಿಂದ ಅವರ ಒಳ್ಳೆಯ ಮತ್ತು ಕೆಟ್ಟ ಕಾಲದಲ್ಲಿ ನಿಮ್ಮ ಮೇಲೆ ಪರಿಣಾಮ ಬೀರಬಹುದು.
ಇತರರ ಬಟ್ಟೆಗಳನ್ನು ಧರಿಸುವುದರಿಂದ ಒಬ್ಬರ ನಕಾರಾತ್ಮಕ ಶಕ್ತಿ ಇನ್ನೊಬ್ಬರಿಗೆ ವರ್ಗಾಯಿಸುತ್ತದೆ. ನಾವು ಸಮಾರಂಭಗಳು ಮತ್ತು ಪಾರ್ಟಿಗಳ ಸಮಯದಲ್ಲಿ ಸಂಬಂಧಿಕರು ಮತ್ತು ಸ್ನೇಹಿತರಿಂದ ಬಟ್ಟೆಗಳನ್ನು ಎರವಲು ಪಡೆಯುತ್ತೇವೆ. ನಂತರ ನಾವು ಅದನ್ನು ಅವರಿಗೆ ಹಿಂತಿರುಗಿಸುತ್ತೇವೆ. ಆದರೆ... ಆ ತಪ್ಪನ್ನು ಮಾಡಬೇಡಿ. ಹೀಗೆ ಮಾಡುವುದರಿಂದ, ನಿಮ್ಮೊಳಗಿನ ಸಕಾರಾತ್ಮಕ ಶಕ್ತಿ ಕಳೆದುಹೋಗುತ್ತದೆ ಮತ್ತು ನೀವು ಯಾರ ಬಟ್ಟೆ ಧರಿಸಿದ್ದೀರೋ ಅವರ ನಕಾರಾತ್ಮಕ ಶಕ್ತಿಯು ನಿಮಗೆ ಸಿಗುತ್ತದೆ. ಇದು ತೊಂದರೆಗಳನ್ನು ಉಂಟುಮಾಡುತ್ತದೆ ಎನ್ನಲಾಗುತ್ತದೆ.