ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ಬಹಳ ಸದ್ದು ಮಾಡಿದ ಕಮಿಷನ್ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೆ ಪ್ರಸ್ತಾಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಠಗಳಿಗೂ ಶೇ.30ರಷ್ಟು ಕಮಿಷನ್ ನೀಡಬೇಕಿದೆ ಎಂಬ ಬರಹವನ್ನು ಟ್ವೀಟ್ ಮಾಡುವ ಮೂಲಕ ಈ ಅನ್ಯಾಯಕ್ಕೆ ಯಾರು ಹೊಣೆ, ಮುಖ್ಯಮಂತ್ರಿಗಳೇ ಇದಕ್ಕೇನಂತೀರಾ. ಇದಕ್ಕೆ ಉತ್ತರ ಕೊಡಿ ಎಂದು ಹೇಳಿದ್ದಾರೆ.
ಧರ್ಮರಕ್ಷಣೆ ಎನ್ನುವುದು ಮುಖವಾಡ , ಭ್ರಷ್ಟಾಚಾರ ಅಸಲಿ ಮುಖವೇ ಎಂದಿರುವ ಅವರು ರಾಜ್ಯದಲ್ಲಿ ಎಸಿಬಿ ಇನ್ನೂ ಜೀವಂತವಾಗಿದೆಯೇ ಎಂದೂ ಕೂಡ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.