ನ್ಯೂಸ್

ದೀಪಾವಳಿ ಹಬ್ಬದ ಖರೀದಿ; ದಾಖಲೆ ಮಟ್ಟದ ಏರಿಕೆ ಕಂಡ ಚಿನ್ನದ ಬೆಲೆ; ಇಂದು 1,34.800 ರೂ. ತಲುಪಿದ 10 ಗ್ರಾಂ ಚಿನ್ನ| Gold Price

New Delhi: ದೀಪಾವಳಿ ಹಬ್ಬ ಶುರುವಾಗುವ ಮೊದಲೇ ಚಿನ್ನಾಭರಣ ಪ್ರಿಯರು, ವ್ಯಾಪಾರಿಗಳ ಖರೀದಿಯಿಂದಾಗಿ ಇಂದು (ಅ. 17) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ(Gold Price) 3,200 ಏರಿಕೆಯೊಂದಿಗೆ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ದಾಖಲೆಯ ಮಟ್ಟ  1,34,800 ರೂ. ತಲುಪಿದೆ.

ನಿನ್ನೆಯ ಗುರುವಾರದ ವಹಿವಾಟಿನಲ್ಲಿ  10 ಗ್ರಾಂಗೆ 1,31,600 ರೂಪಾಯಿಗೆ ಕೊನೆಗೊಂಡಿತ್ತು. ಇದರ ಜೊತೆಗೆ, ಶೇಕಡಾ 99.5 ರಷ್ಟು ಶುದ್ಧತೆಯ ಚಿನ್ನದ ಬೆಲೆಯೂ ಸಹ 3,200 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ 1,34,200 ರೂ.ಗಳಷ್ಟು (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.

ಹಿಂದೂ ಸಂಪ್ರದಾಯದಲ್ಲಿ ಅಮೂಲ್ಯ ಲೋಹಗಳನ್ನು ಖರೀದಿಸಲು ಶುಭ ದಿನವೆಂದು ಪರಿಗಣಿಸಲಾದ ಧನ್ ತೇರಸ್ (ಲಕ್ಷ್ಮೀ ಪೂಜೆ) ಅನ್ನು ಶನಿವಾರ ಆಚರಿಸಲಾಗುತ್ತದೆ ಮತ್ತು ನಂತರ ಸೋಮವಾರ ದೀಪಾವಳಿ ಆಚರಿಸಲಾಗುತ್ತದೆ. ಈ ಹಿನ್ನೆಲೆ ಚಿನ್ನ ಖರೀದಿ ಭರಾಟೆ ಜೋರಾಗಿದೆ.

ಆದರೆ ಆಶ್ಚರ್ಯಕರ ರೀತಿಯಲ್ಲಿ ಬೆಳ್ಳಿ ಬೆಲೆ ಇಂದು ಕುಸಿದಿದ್ದು, ಪ್ರತಿ ಕಿಲೋ ಗ್ರಾಂಗೆ 7 ಸಾವಿರ ರೂ. ಕುಸಿದು 1,77,000 ರೂಗೆ ತಲುಪಿದೆ. ಗುರುವಾರದ ವಹಿವಾಟಿನಲ್ಲಿ 1,84,000 ರೂಪಾಯಿಗೆ ಏರಿಕೆಯಾಗಿತ್ತು. (ಏಜೆನ್ಸೀಸ್)