ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಹಬ್ಬವನ್ನು ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಆಚರಿಸಲಾಗುತ್ತದೆ. ಹಬ್ಬದಲ್ಲಿ ಬಣ್ಣದ ಬಣ್ಣದ, ವಿವಿಧ ವಿನ್ಯಾಸಗಳ 'ದೀಪಗಳು' ಆಕರ್ಷಣೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಕೆಲವರು ಹಣತೆಗಳ ಜೊತೆಗೆ ಡೆಕೋರೇಟಿವ್ ಲೈಟ್ಸ್ ಅನ್ನೂ ಖರೀದಿಸುತ್ತಾರೆ. ಹಾಗಾಗಿ ಆಕರ್ಷಕ ಲೈಟ್ಸ್ ಖರೀದಿಸುವ ಮುನ್ನ ಈ 10 ಅಂಶಗಳನ್ನು ಗಮನದಲ್ಲಿಡುವುದು ಮುಖ್ಯ.
ಬ್ರಾಂಡ್ಗಳ ಬಗ್ಗೆ ಗಮನವಿರಲಿ
ಲೈಟ್ಸ್ ಖರೀದಿಸುವ ಮುನ್ನ ಬ್ರಾಂಡ್ ತುಂಬಾ ಮುಖ್ಯವಾಗುತ್ತದೆ. ಏಕೆಂದರೆ ಸುರಕ್ಷತೆಯನ್ನು ಕಾಪಾಡುವ ಮತ್ತು ದೀರ್ಘವಾಗಿ ಉರಿಯುವ ಲೈಟ್ಸ್ ಖರೀದಿಸಿ.
ವೆಚ್ಚ ಮತ್ತು ಇಂಧನ ಸ್ನೇಹಿ
ಎಲ್ಇಡಿ ದೀಪಗಳು, ಸ್ಮಾರ್ಟ್ ಲೈಟ್ ಬಳಸುವುದರ ಮೂಲಕ ಹಣವನ್ನು ಮತ್ತು ಇಂಧನ ಎರಡನ್ನೂ ಉಳಿಸಬಹುದು, ಅಷ್ಟೇ ಅಲ್ಲದೆ ಈ ದೀಪಗಳು ಸುರಕ್ಷತೆ ಮತ್ತು ದೀರ್ಘಾವಧಿ ಬಾಳಿಕೆ ಬರುತ್ತವೆ.
ಸ್ಥಳಕ್ಕೆ ಅನುಸಾರವಾಗಿ
ಸ್ಥಳಕ್ಕೆ ಅನುಸಾರವಾಗಿ ದೀಪಗಳನ್ನು ಖರೀದಿಸಬೇಕು. ಉದಾಹರಣೆಗೆ, ಮರದ ಸುತ್ತಲೂ ದೀಪಗಳನ್ನು ಹಚ್ಚಲು ನಾವು ಎಲ್ಇಡಿ ಸ್ಟ್ರಿಪ್ ಲೈಟ್ ಗಳನ್ನು ಬಳಸುತ್ತೇವೆ. ಮನೆಗಳಲ್ಲಿ ಹಚ್ಚಲು ಹಣತೆಗಳನ್ನು ಬಳಸುತ್ತೇವೆ.
ಗಿಡ ಮರಗಳಿಗೆ ಎಲ್ಇಡಿ ಸ್ಟ್ರಿಪ್ ಲೈಟ್
ಸುತ್ತಮುತ್ತಲಿನ ಗಿಡ-ಮರಗಳನ್ನು ಬೆಳಗಿಸಲು ಎಲ್ಇಡಿ ಸ್ಟ್ರಿಪ್ ಲೈಟ್ ಗಳನ್ನು ಬಳಸುವುದು ಉತ್ತಮ. ಸ್ಟ್ರಿಪ್ ಲೈಟ್ ಗಳು ನೋಡಲು ಆಕರ್ಷಕವಷ್ಟೇ ಅಲ್ಲದೆ, ಅವುಗಳನ್ನು ಕನ್ನಡಿ, ಬಾಟಲ್ ಗಳಲ್ಲೂ ಅಳವಡಿಸಬಹುದು.
ಕರ್ಟನ್ ಲೈಟ್ ಬಳಸುವಾಗ ಎಚ್ಚರವಿರಲಿ
ಕರ್ಟನ್ ಲೈಟ್ ಅಳವಡಿಸುವಾಗ ಎಚ್ಚರವಿರಲಿ. ಉತ್ತಮ ಗುಣಮಟ್ಟದ ದೀಪಗಳನ್ನು ಖರೀದಿಸಿ. ಮಲಗುವ ಮುನ್ನ, ಕಟರ್ನ್ ಲೈಟ್ ಗಳನ್ನು ಆರಿಸುವುದನ್ನು ಮರೆಯದಿರಿ.
ಒಳಾಂಗಣ ಮತ್ತು ಹೊರಾಂಗಣಗಳಿಗೆ ಪ್ರತ್ಯೇಕ ದೀಪಗಳು
"ಡೆಕೋರೇಟಿವ್" ದೀಪಗಳಲ್ಲಿ ಹಲವಾರು ಬಗೆಗಳಿವೆ. ಎಲ್ಇಡಿ ಬಲ್ಬ್ ಗಳು, ಎಲ್ಇಡಿ ಸ್ಟ್ರಿಪ್ ಲೈಟ್ ಗಳು, ಎಲ್ಇಡಿ ಹಣತೆಗಳು, ಕ್ಯಾಂಡಲ್ ಗಳು ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣಗಳಿಗೆ ಪ್ರತ್ಯೇಕವಾದ ಆಕರ್ಷಕ ದೀಪಗಳಿವೆ.
ಬೆಳಕಿನೊಂದಿಗೆ, ಬಣ್ಣಗಳೊಂದಿಗೆ ಆಟವಾಡಿ
ಆಕರ್ಷಕ ದೀಪಗಳು ಹಲವಾರು ಬಣ್ಣಗಳಲ್ಲಿ ಲಭ್ಯವಿದೆ. ಬಣ್ಣಗಳನ್ನು ಬದಲಿಸಬಲ್ಲ ದೀಪಗಳೂ ಕೂಡ ಲಭ್ಯವಿದೆ. ಬಣ್ಣಗಳ ತಾಪಮಾನ, ಹೊಳಪನ್ನು ಬದಲಾಯಿಸಬಲ್ಲ "ಫೀಚರ್ಸ್" ಕೂಡ ಲಭ್ಯವಿದೆ.
ಹೆಚ್ಚುವರಿ "ಆಪ್ಶಷ್ನ್ಸ್" ಇರುವ ದೀಪಗಳು
ನಾವು ಈಗ "ಸ್ಮಾರ್ಟ್" ಯುಗದಲ್ಲಿದ್ದೇವೆ. ಆದ್ದರಿಂದ ಹೆಚ್ಚು "ಆಪ್ಶಷ್ನ್ಸ್" ಗಳುಳ್ಳ ಲೈಟ್ ಗಳನ್ನು ಬಳಸಬಹುದಾಗಿದೆ. ''ಸೆನ್ಸಾರ್'' ಅಳವಡಿಕೆ, ರಿಮೋಟ್ ನಿಯಂತ್ರಣ ಸೇರಿದಂತೆ ವಿವಿಧ ಬಗೆಗಳ "ಆಪ್ಶಷ್ನ್ಸ್" ಹೊಂದಿರುವ ದೀಪಗಳನ್ನು ಖರೀದಿಸಬಹುದಾಗಿದೆ.
"ವೆದರ್ ಪ್ರೂಫ್" ಬಳಕೆ
ಹವಾಮಾನ ಪರಿಸ್ಥಿತಿಗಳು ಆಕರ್ಷಕ ದೀಪಗಳಿಗೆ ಹಾನಿಯನ್ನು ಉಂಟುಮಾಡಬಹುದು. ಈ ಕಾರಣ ವೆದರ್ ಪ್ರೂಫ್ ದೀಪಗಳನ್ನು ಬಳಸಬೇಕು. ಮಳೆ, ಗಾಳಿಯಿಂದ ರಕ್ಷಸಿಕೊಳ್ಳಬಲ್ಲ ದೀಪಗಳನ್ನು ಖರೀದಿಸಬೇಕು. ಅಷ್ಟೇ ಅಲ್ಲದೆ, ಧೂಳು ಮತ್ತು ನೀರು ನಿರೋಧಕ ಶಕ್ತಿಯನ್ನು ಹೊಂದಿರುವ ದೀಪಗಳನ್ನು ಬಳಸಬೇಕು.
"ಆ್ಯಂಟಿಕ್ ಲುಕ್" ಗಾಗಿ ಆಕಾಶಬುಟ್ಟಿಗಳು
"ಆ್ಯಂಟಿಕ್ ಲುಕ್" ಬೇಕೆನಿಸಿದರೆ, "ಲ್ಯಾಂಟರ್ನ್" ಅಥವಾ ಆಕಾಶಬುಟ್ಟಿಗಳನ್ನು ಬಳಸಬಹುದು. ಮನೆಯಂಗಳದಲ್ಲಿ, ಬಾಲ್ಕನಿಯಲ್ಲಿ ಇವುಗಳನ್ನು ಬೆಳಗಿಸಬಹುದಾಗಿದೆ.