ನ್ಯೂಸ್

'ನೀನು ದೇವರ ಕೊಡುಗೆ 'ನಟಿ ತನ್ನ ಪ್ರೀತಿಯ ನೆನಪಿಗಾಗಿ ಪೋಸ್ಟ್!

ನವದೆಹಲಿ: ಬಾಲಿವುಡ್ ನಟಿ ದಿವ್ಯಾ ಸೇಠ್ ದಿಲ್ ಧಡಕ್​ನೆ ದೋ, ಜಬ್ ವಿ ಮೆಟ್ ಮುಂತಾದ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಈ ನಟಿ ತನ್ನ ಪುತ್ರಿ 24ವರ್ಷದ ಮಿಹಿಕಾಳನ್ನು ಕಳೆದುಕೊಂಡಿದ್ದು, ಆಕೆ ನೆನಪಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಈ ಬಾರಿಯೂ ಅಂಥದ್ದೇ ಘಟನೆ ನಡೆದಿದೆ. ದಿವ್ಯಾ ಪ್ರೀತಿಯ ಮಗಳ ನೆನಪಿಗಾಗಿ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.

ಮಗಳ ಜೊತೆಗಿನ ಫೋಟೋವನ್ನು ದಿವ್ಯಾ ಸೇಠ್ ಹಂಚಿಕೊಂಡಿದ್ದಾರೆ.

ದಿವ್ಯಾ ಸೇಠ್ ಗೆ ಮಗಳ ಅಗಲಿಕೆಯ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅವರ ಇತ್ತೀಚಿನ ಪೋಸ್ಟ್‌ನಲ್ಲಿ ಅವರ ನೋವು ಸ್ಪಷ್ಟವಾಗಿ ಗೋಚರಿಸುತ್ತದೆ. ಶನಿವಾರ, ನಟಿ ಇನ್​ಸ್ಟಾಗ್ರಾಮ್​ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ.

"ನಾನು ನಿನ್ನ ಚಿತ್ರವನ್ನು ನೋಡಿದಾಗ, ಶುದ್ಧ ಪ್ರೀತಿ ಎದುರಿಗೆ ಕಾಣುತ್ತದೆ. ಗಾಯಗೊಂಡ ಆತ್ಮಕ್ಕೆ ಸಾಂತ್ವನದ ದಾರಿ ತೆರೆದುಕೊಳ್ಳುತ್ತದೆ. ನಿನ್ನ ಕಾಳಜಿ ನೆನಪಾಗಿ ನೋವನ್ನು ದೂರಮಾಡುತ್ತದೆ. ನೀನು ದೇವರ ಕೊಡುಗೆ, ನಾನು ನಿನ್ನನ್ನು ಪ್ರೀತಿಸುತ್ತೇನೆ ಮಿಹಿಕಾ ಎಂದು ಬರೆದುಕೊಂಡಿದ್ದಾರೆ.

ದಿವ್ಯಾ ಮತ್ತಷ್ಟು ಬರೆದಿದ್ದಾರೆ, ಈ ಜೀವಿತಾವಧಿಯಲ್ಲಿ ಯಾರೂ ನನ್ನನ್ನು ನೀನು(ಮಿಹಿಕಾ) ಪ್ರೀತಿಸಿದಷ್ಟು ಪ್ರೀತಿಸುವುದಿಲ್ಲ. ನೀನು ನನ್ನನ್ನು ನೋಡಬಹುದು ಎಂದು ನಾನು ಭಾವಿಸುತ್ತೇನೆ. ನಾನು ಧೈರ್ಯಶಾಲಿ ಎಂದು ಭರವಸೆ ನೀಡುತ್ತೇನೆ. ನಾವು ಯೋಜಿಸಿರುವ ಎಲ್ಲವನ್ನೂ ನಾನು ಮಾಡುತ್ತೇನೆ. ಸಮುದ್ರತೀರದಲ್ಲಿ ನಿನ್ನನ್ನು ನೋಡೋಣ.ಕಾಡಿನ ಕಗ್ಗತ್ತಲಿನಲ್ಲಿ ಮೂಡಿ ಬರುವ ಬೆಳಕಿನಂತೆ ನೀನು ನನ್ನ ಬಾಳಲ್ಲಿ ಬಂದೆ ಎಂದು ಎಮೋಜಿಗಳೊಂದಿಗೆ ಪೂರ್ಣಗೊಳಿಸಿದ್ದಾರೆ.

ಈ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಅನೇಕ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿದ್ದಾರೆ. ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್, ಅನುಷ್ಕಾ ರಂಜನ್ ಮತ್ತು ಅಹಾನಾ ಕುಮ್ರಾ ಅವರು ಕೆಂಪು ಹೃದಯದ ಎಮೋಜಿಗಳನ್ನು ಪೋಸ್ಟ್​ ಮಾಡಿದ್ದಾರೆ. ರೋನಿತ್ ಬೋಸ್ ರಾಯ್ "ದೇವರು ಆಶೀರ್ವದಿಸಲಿ" ಎಂದು ಬರೆದಿದ್ದಾರೆ. ವರದಿಗಳ ಪ್ರಕಾರ ಮಿಹಿಕಾಗೆ ಮೊದಲು ಜ್ವರ ಕಾಣಿಸಿಕೊಂಡಿತು ಮತ್ತು ನಂತರ ಪಾರ್ಶ್ವವಾಯುವಿಗೆ ಒಳಗಾದಳು. ಬಳಿಕ ಅದು ಆಕೆಯ ಸಾವಿಗೆ ಕಾರಣವಾಯಿತು.