ನ್ಯೂಸ್

ಸಂಪೂರ್ಣ ಸೌರಶಕ್ತಿ ಬಳಕೆ ದೇಶದ ಮೊದಲ ಜಿಲ್ಲೆ ದಿಯು

ನವದೆಹಲಿ: ನವಿಕರಿಸಬಹುದಾದ ಇಂಧನ ಅಳವಡಿಕೆಯಲ್ಲಿ ದಿಯು ರಾಷ್ಟ್ರೀಯ ಉದಾಹರಣೆಯಾಗಿದ್ದು, ಅದರ ಸಂಪೂರ್ಣ ಹಗಲಿನ ವಿದ್ಯುತ್ ಬೇಡಿಕೆಯನ್ನು ಸೌರಶಕ್ತಿಯ ಮೂಲಕ ಪೂರೈಸಲಾಗುತ್ತಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

11.88 ಮೆಗಾವ್ಯಾಟ್ ಮೇಲ್ಚಾವಣಿ ಸಾಮರ್ಥ್ಯವನ್ನು ಸಾಧಿಸುವ ಮೂಲಕ ತನ್ನ ಸಂಪೂರ್ಣ ವಿದ್ಯುತ್ ಬೇಡಿಕೆಯನ್ನು ಸೌರಶಕ್ತಿಯೊಂದಿಗೆ ಪೂರೈಸಿದ ಭಾರತದ ಮೊದಲ ಜಿಲ್ಲೆಯಾಗಿ ದಿಯು ಅಸಾಧಾರಣ ಮೈಲಿಗಲ್ಲು ಸಾಧಿಸಿದೆ ಎಂದು ಅವರು ಪ್ರಶಂಸಿಸಿದರು. ಕೇಂದ್ರಾಡಳಿತ ಪ್ರದೇಶದ ಹಿರಿಯ ಅಧಿಕಾರಿಗಳೊಂದಿಗೆ ದಿಯುನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸಚಿವರು, ನಂತರ ಫುಡಾಮ್ಲ್ಲಿರುವ 9 ಮೆಗಾವ್ಯಾಟ್ ಸೌರ ಪಾರ್ಕ್ ಸೇರಿದಂತೆ ದಿಯುವಿನ ಪ್ರಮುಖ ಸೌರ ಶಕ್ತಿ ಸೌಲಭ್ಯಗಳಿಗೆ ಭೇಟಿ ನೀಡಿದರು.

ದಿಯುನ ಸುಸ್ಥಿರ ಪರಿವರ್ತನೆಯ ಸಂಕೇತವಾಗಿ ಸೌರ ಪಾರ್ಕ್ ನಿಂತಿದೆ, ಪ್ರದೇಶದ ಶುದ್ಧ ಇಂಧನ ಅಗತ್ಯಗಳನ್ನು ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸರಣ ಮತ್ತು ವಿತರಣಾ ನಷ್ಟವನ್ನು ಕಡಿಮೆ ಮಾಡಲು ಫುಡಮ್ ಸೌರ ಪಾರ್ಕ್ ಗಮನಾರ್ಹ ಕೊಡುಗೆ ನೀಡಿದೆ. ವಿದ್ಯುತ್ ವೆಚ್ಚವು ಗ್ರಾಹಕರ ಕೈಗೆಟುಕುವಂತೆ ಮಾಡಿದೆ ಎಂದು ಸಚಿವರು ಹೇಳಿದರು.