ಮಾಸ್ಕೋ: ರೀಲ್ಸ್ (reels) ಮಾಡಲು ಡಿಸ್ಬರ್ಬ್ ಮಾಡಿತ್ತು ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಅಂಬೆಗಾಲಿಡುವ ಮಗುವನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ. ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹ ಕೇಳಿ ಬರುತ್ತಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಇರುವುದನ್ನು ನೋಡಬಹುದಾಗಿದೆ. ಒಬ್ಬ ಮಹಿಳೆ ಫ್ರೇಮ್ನಿಂದ ಹೊರಬಂದರೆ ಇನ್ನೋರ್ವ ಮಹಿಳೆ ಮಗುವನ್ನು ಕಾಲಿನಿಂದ ಒದೆಯುತ್ತಿರುವುದನ್ನು ನೋಡಬಹುದಾಗಿದೆ. ಮಗು ಬೆಡ್ನ ಮತ್ತೊಂದು ತುದಿಗೆ ಬಿದ್ದ ಬಳಿಕ ಮಹಿಳೆ ತನ್ನ ಪಾಡಿಗೆ ಡ್ಯಾನ್ಸ್ ಮಾಡಲು ಆರಂಭಿಸುತ್ತಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಮಹಿಳೆಯ ನಡೆಗೆ ಕಿಡಿಕಾರಿದ್ದು, ಆಕೆಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಇದು ಭಯಾನಕವಾಗಿದೆ. ಇಂತಹ ಕ್ರೌರ್ಯಕ್ಕೆ ಯಾವುದೇ ಕ್ಷಮಿಯಿಲ್ಲ. ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.