ನ್ಯೂಸ್

ವಿವಿಧ ಕ್ರೀಡಾಕೂಟ ನಾಳೆ ಆ. 29ರಂದು

ಹಾವೇರಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಕ್ರೀಡಾ ಕಾರ್ಯಕ್ರಮ ಹಾಗೂ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಆ. 29ರಂದು ಬೆಳಗ್ಗೆ 10&30ಕ್ಕೆ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 6&30ಕ್ಕೆ 35 ವರ್ಷ ಮೇಲ್ಪಟ್ಟವರಿಗೆ 2.ಕಿ.ಮೀ. ಹಾಗೂ 35 ವರ್ಷದೊಳಗಿನವರಿಗೆ 3.ಕಿ.ಮೀ. ಓಟ ಜರುಗಲಿದೆ. ಬೆಳಗ್ಗೆ 10&30ಕ್ಕೆ ಬಾಲಕ ಮತ್ತು ಬಾಲಕಿಯರಿಗೆ ಹಾಕಿ ಹಾಗೂ ಪುರುಷರಿಗೆ ಹ್ಯಾಂಡಬಾಲ್​ ಮತ್ತು ಪುಟ್​ಬಾಲ್​ ಕ್ರೀಡೆ ಆಯೋಜಿಸಲಾಗಿದೆ.
ಇದೇ ಸಂದರ್ಭದಲ್ಲಿ 2023&24ನೇ ಸಾಲಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕ ವಿಜೇತ ಜಿಲ್ಲೆಯ ಕ್ರೀಡಾಪಟುಗಳನ್ನು ಸನ್ಮಾನಿಸಲು ಉದ್ದೇಶಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಆ. 28ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಅಜಿರ್ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.