ನ್ಯೂಸ್

ಮಕ್ಕಳ ರಕ್ಷಣೆಗೆ ಆದ್ಯತೆ ನೀಡಿ

Kopala - Raveendra V K

ಕೊಪ್ಪಳ: ದ್ವಿಚಕ್ರ ವಾಹನಗಳಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಸುರಕ್ಷತಾ ಬೆಲ್ಟ್ ಧರಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಹೇಳಿದರು.

ನಗರದ ಎಸ್ಎ್ಎಸ್ ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಮಕ್ಕಳ ಪೋಷಕರು ಮತ್ತು ಪಾಲಕರಿಗೆ ಸುರಕ್ಷತಾ ಬೆಲ್ಟ್ ಧರಿಸುವ ಬಗ್ಗೆ ಪ್ರಾಯೋಗಿಕವಾಗಿ ಬೇಲ್ಟ್ ಹಾಕುವ ಮೂಲಕ ಮಾಹಿತಿ ನೀಡಿ ಮಾತನಾಡಿದರು.

ನಾಲ್ಕು ವರ್ಷದೊಳಗಿನ ಮಕ್ಕಳನ್ನು ಬೈಕ್ನಲ್ಲಿ ಕರೆದೊಯ್ಯುವಾಗ ಎಚ್ಚರಿಕೆ ಅಗತ್ಯ. ಅವರು ನಿದ್ದೆಗೆ ಜಾರುವ ಸಾಧ್ಯತೆ ಬಹಳ. ಸುರಕ್ಷತೆ ದೃಷ್ಟಿಯಿಂದ ಸುರಾ ಬೆಲ್ಟ್ (ಸೇಫ್ಟಿ ಹಾರ್ನೆಸ್ ಬೆಲ್ಟ್) ಧರಿಸಬೇಕು. ಈ ಬಗ್ಗೆ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಬೆಲ್ಟ್ಗಳು ಬೈಕ್ ಶೋರೂಂಗಳಲ್ಲಿ ದೊರೆಯುತ್ತವೆ. 4 ವರ್ಷದೊಳಗಿನ ಮಕ್ಕಳನ್ನು ಹೊಂದಿರುವ ಪಾಲಕರು ಬೆಲ್ಟ್ ಖರೀದಿಸಿ ಮಕ್ಕಳ ರಕ್ಷಣೆಗೆ ಮುಂದಾಗಿ ಎಂದರು.

ಬೈಕ್ನಲ್ಲಿ ಮಕ್ಕಳನ್ನು ಕರೆದೊಯ್ಯುವಾಗ ಬೆಲ್ಟ್ ಬಳಸುವಿಕೆ, ಹೆಲ್ಮೆಟ್ ಧರಿಸುವುದು, ಮಕ್ಕಳನ್ನು ಕರೆದೊಯ್ಯುವಾಗ ಗಂಟೆಗೆ 40 ಕಿ.ಮೀ.ವೇಗದಲ್ಲಿ ಬೈಕ್ ಓಡಿಸುವಂತೆ ಅರಿವು ಮೂಡಿಸಲಾಯಿತು.

ಮೋಟಾರು ವಾಹನ ನಿರೀಕ್ಷಕ ವಿಜಯೇಂದ್ರ ದವಳಗಿ, ಅಧೀಕ್ಷಕ ನರಸಪ್ಪ, ಸಿಬ್ಬಂದಿ ಸಿದ್ದೇಶ ಕುರಟ್ಟಿ, ರಂಜಿತ, ಸಹಜಾನಂದ, ಜಯಶ್ರೀ ಶಿರೂರು, ಸಿದ್ರಾಮಪ್ಪ ಕಗ್ಗೋಡ, ಶಕುಂತಲಾ ಕಡಕೋಳ ಇತರರಿದ್ದರು.