ಕೊಪ್ಪಳ:ಕೇಂದ್ರ ಸಚಿವ ಅಮಿತ್ ಷಾ ಹೇಳಿಕೆ ಖಂಡಿಸಿ ಜ.6ರಂದು ಕೊಪ್ಪಳ ಬಂದ್ ಮಾಡೋಣ. ಅಹಿಂಸಾತ್ಮಕ ಹೋರಾಟಕ್ಕೆ ಆದ್ಯತೆ ಇರಲಿ. ನಾವು ಹೋಗಿ ನಮಸ್ಕಾರ ಮಾಡಿದರೆ ಜನ ಬೆಂಬಲ ಸೂಚಿಸುತ್ತಾರೆಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬಂದ್ ಅಂಗವಾಗಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಅಹಿಂಸಾತ್ಮಕವಾಗಿಯೇ ನಮ್ಮ ವಿಚಾರಗಳನ್ನು ಗಟ್ಟಿಯಾಗಿ ಪ್ರತಿಪಾದಿಸಲು ಅವಕಾಶವಿದೆ. ಇಲ್ಲದಿದ್ದರೆ ಸಂಟನೆಗಳ ಬಗ್ಗೆ ತಪು$್ಪ ಅಭಿಪ್ರಾಯ ಬರಲಿದೆ. ಬೆಳಗ್ಗೆ 11 ಗಂಟೆಯೊಳಗೆ ಪ್ರತಿಭಟನೆ ಆರಂಭಿಸೋಣ. ಈಗ ನಡೆವ ಮಾದರಿಯಲ್ಲಿ ಮುಂದೆ ಅಣು ಸ್ಥಾವರ ಹಾಗೂ ಎಂಎಸ್ಪಿಎಲ್ ಕಾರ್ಖಾನೆ ವಿಸ್ತರಣೆ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಹನುಮೇಶ ಕಡೆಮನಿ ಮಾತನಾಡಿ, 10 ಸಾವಿರ ಜನಗೆ ಆಗುವಷ್ಟು ಊಟದ ವ್ಯವಸ್ಥೆ ಮಾಡಲಾಗಿದೆ. ಆಟೋಗಳ ಮೂಲಕ ಬಂದ್ ಬಗ್ಗೆ ಪ್ರಚಾರ ನಡೆಸಲಾಗುತ್ತಿದೆ. ಕುಡಿವ ನೀರಿನ ಟ್ಯಾಂಕ್ ನಿಲ್ಲಿಸಲಾಗುವುದು. 150ಕ್ಕೂ ಹೆಚ್ಚು ಬೈಕ್ ರ್ಯಾಲಿ ನಡೆಸಲಿವೆ. ಆಟೋ, ವರ್ತಕರು ಸ್ವಯಂ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಲಿದ್ದಾರೆ. ಕುಕನೂರು, ಯಲಬುರ್ಗಾದಿಂದ ಅನೇಕರು ಆಗಮಿಸಲಿದ್ದಾರೆ ಎಂದರು.
ವಕೀಲರ ಸಂದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿದರು. ವಿವಿಧ ಸಂಟನೆಗಳ ಮುಖಂಡರಾದ ಬಸವರಾಜ ಶೀಲವಂತರ, ರಾಮಣ್ಣ ಚೌಡ್ಕಿ, ಚನ್ನಬಸಪ್ಪ, ಪರಶುರಾಮ್ ಕೆರೆಹಳ್ಳಿ, ಗವಿಸಿದ್ದಪ್ಪ ಬೆಲ್ಲದ್, ಸಿದ್ದರಾಮ ಹೊಸಮನಿ, ಎಸ್.ಎ.ಗಫಾರ್, ಗಾಳೆಪ್ಪ ಮುಂಗೊಲಿ ಇತರರಿದ್ದರು.