ನ್ಯೂಸ್

ಜಿಲ್ಲಾ ನ್ಯಾಯಾಧೀಶರ ಹುದ್ದೆ ಭರ್ತಿಗೆ ಅಧಿಸೂಚನೆ: ಹೈಕೋರ್ಟ್‌ನಿಂದ ಆನ್‌ಲೈನ್ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ವಿವಿಧೆಡೆ ಖಾಲಿಯಾಗಿರುವ 14 ಜಿಲ್ಲಾ ನ್ಯಾಯಾಧೀಶರ ಹುದ್ದೆಗಳನ್ನು ನೇರ ನೇಮಕಾತಿ ಅಡಿಯಲ್ಲಿ ಭರ್ತಿ ಮಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ. ಗುರುವಾರದಿಂದಲೇ (ಅ.19) ಆನ್‌ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

ಭರ್ತಿ ಮಾಡಲಾಗುವ ಹುದ್ದೆಗಳ ಪೈಕಿ 13 ಬ್ಯಾಕ್‌ಲಾಗ್‌ಗೆ ಸೇರಿದ್ದು, ಉಳಿದೊಂದು ಹುದ್ದೆ ಹೊಸದಾಗಿ ಸೃಜಿಸಲಾಗಿದೆ. ವಯೋಮಿತಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 45 ವರ್ಷ ಹಾಗೂ ಪರಿಶಿಷ್ಟರ ಅಭ್ಯರ್ಥಿಗಳಿಗೆ 48 ವರ್ಷ ನಿಗದಿ ಮಾಡಲಾಗಿದೆ. ಮಾಜಿ ಯೋಧ ಕೋಟಾ ಅಡಿಯಲ್‌ಇಲರುವ ಬರುವ ಅಭ್ಯರ್ಥಿಗಳಿಗೆ 3 ವರ್ಷ ಗರಿಷ್ಠ ವಯೋಮಿತಿ ಇರಲಿದೆ.

ಅಭ್ಯರ್ಥಿಗಳಿಗೆ ಮೂರು ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ನ.17 ಕೊನೆಯ ದಿನವಾಗಿದ್ದು, ಶುಲ್ಕ ಪಾವತಿಸಲು ನ.18ರ ಮಧ್ಯರಾತ್ರಿ 11.59ರ ವರೆಗೆ ಅವಕಾಶ ನೀಡಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ತಿಳಿಸಿದ್ದಾರೆ.