ಉಡುಪಿ: ಕಟಪಾಡಿ, ಏಣಗುಡ್ಡೆ ರೈಲ್ವೆ ಟ್ರ್ಯಾಕ್ ಬಳಿ ವಾಸವಿರುವ ಮುದ್ದು ಪೂಜಾರಿ ಎಂಬವರ ಬದುಕು ಶೋಚನೀಯವಾಗಿ, ಲಾಕ್ಡೌನ್ ಸಮಯದಲ್ಲಿ ಊಟಕ್ಕಿಲ್ಲದ ಪರಿಸ್ಥಿತಿ ಇದೆ. ಮುರುಕಲು ಮನೆಯಲ್ಲಿ ವಾಸವಿರುವ ಇವರು 8 ವರ್ಷಗಳಿಂದ ಗಂಜಿ ಬಿಟ್ಟು ಬೇರೇನೂ ಸೇವಿಸುತ್ತಿರಲಿಲ್ಲ.
ಸರ್ಕಾರದ ವೃದ್ಧಾಪ್ಯ ವೇತನದ ಹಣ ಮಾತ್ರ ಇವರಿಗೆ ಸಿಗುತ್ತದೆ. ವೋಟರ್ ಐಡಿ, ರೇಷನ್ ಕಾರ್ಡ್, ವಿದ್ಯುತ್, ನೀರಿನ ಸಂಪರ್ಕ ಇವರಿಗೆ ಇಲ್ಲ. ಲಾಕ್ಡೌನ್ನಿಂದಾಗಿ ವೇತನವೂ ಕೈ ಸೇರಿಲ್ಲ. ಅಂಗಡಿಯಿಂದ ಅಕ್ಕಿ ತರಲೂ ಆಗುತ್ತಿರಲಿಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಶಿಕ್ಷಕಿ, ಇನ್ನೊಬ್ಬರು ಇಂಜಿನಿಯರ್. ಮುದ್ದು ಪೂಜಾರಿ ಮನೆಬಿಟ್ಟು ಹೊರಹೋಗಲು ಕೇಳುತ್ತಿಲ್ಲ. ಮಕ್ಕಳ ಮಾತು ಕೇಳುತ್ತಿರಲಿಲ್ಲ.
ಈ ಬಗ್ಗೆ ದಿಗ್ವಿಜಯ ನ್ಯೂಸ್ 247 ವಿಶೇಷ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಮುದ್ದು ಪೂಜಾರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸ್ಥಳಕ್ಕೆ ಕಾಪು ತಹಸೀಲ್ದಾರ್ ಮಹಮ್ಮದ್ ಇಸಾಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.