ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಡಿ.ಮಂಜುನಾಥ  
ನ್ಯೂಸ್

District 19th Kannada Sahitya Conference on 6th and 7th

ಶಿವಮೊಗ್ಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.6 ಮತ್ತು 7ರಂದು

ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದು, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಮ್ಮೇಳನ ಉದ್ಘಾಟಿಸುವರು ಎಂದು

ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಹಿರಿಯ ಸಾಹಿತಿ ಡಾ. ಜೆ.ಕೆ.ರಮೇಶ್ ಸರ್ವಾಧ್ಯಕ್ಷತೆ ವಹಿಸುವರು. 6ರಂದು ಬೆಳಗ್ಗೆ 9.30ಕ್ಕೆ ಸಾಹಿತ್ಯ ಗ್ರಾಮದ ಆವರಣದಲ್ಲಿ ಡಿಡಿಪಿಐ

ಎಸ್.ಆರ್.ಮಂಜುನಾಥ ರಾಷ್ಟ್ರಧ್ವಜ, ವಾರ್ತಾಧಿಕಾರಿ ಆರ್.ಮಾರುತಿ ನಾಡಧ್ವಜ ಧ್ವಜಾರೋಹಣಗೊಳಿಸುವರು ಎಂದು ಸೋಮವಾರ

ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮ್ಮೇಳನದ ನಿಕಟಪೂರ್ವ ಸರ್ವಾಧ್ಯಕ್ಷ ಡಾ. ಎಸ್.ಪಿ.ಪದ್ಮಪ್ರಸಾದ್, ಕುವೆಂಪು ವಿವಿ ಕುಲಪತಿ ಡಾ. ಶರತ್ ಅನಂತಮೂರ್ತಿ,

ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ, ಪಾಲಿಕೆ ಆಯುಕ್ತೆ ಡಾ. ಕವಿತಾ ಯೋಗಪ್ಪನವರ್ ಭಾಗವಹಿಸುವರು. 4

ಸಾವಿರ ಪ್ರತಿನಿಧಿಗಳು ಸಮ್ಮೇಳನಕ್ಕೆ ನೋಂದಣಿಯಾಗಿದ್ದು, ಎರಡು ದಿನಗಳ ಊಟೋಪಚಾರದ ಜತೆಗೆ ಒಡಿ ಸೌಲಭ್ಯ ನೀಡಲಾಗುತ್ತಿದೆ.

10ಕ್ಕೂ ಹೆಚ್ಚು ಗೋಷ್ಠಿಗಳಿದ್ದು, ಪುಸ್ತಕ ಮಾರಾಟ ಮಳಿಗೆಗಳ ಜತೆಯಲ್ಲಿ ವಿಭಿನ್ನ ಬಗೆಯ 25ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ

ನೀಡಲಾಗಿದೆ. ಶಿಕ್ಷಕಿ ಮೇರಿ ಡಿಸೋಜಾ ಸಂಗ್ರಹಿಸಿರುವ ಅಮೂಲ್ಯ ನಾಣ್ಯಗಳು ಹಾಗೂ ಶಿವಮೊಗ್ಗ ನಾಗರಾಜ ಅವರ ಛಾಯಾಚಿತ್ರ

ಪ್ರದರ್ಶನ ಇರಲಿದೆ.

ಸಾಂಸ್ಕೃತಿಕ ನಡಿಗೆ, ಕೃತಿ ಬಿಡುಗಡೆ: ಫೆ.6ರ ಬೆಳಗ್ಗೆ 10ಕ್ಕೆ ಗೋಪಾಳದ ಆನೆ ವೃತ್ತದಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕೃತಿಕ ನಡಿಗೆ ಇರಲಿದೆ. 10.30ಕ್ಕೆ ಸಮ್ಮೇಳನ ಉದ್ಘಾಟನೆಗೊಳ್ಳಲಿದೆ. ಸಚಿವ ಮಧು ಬಂಗಾರಪ್ಪ ಸ್ಮರಣಸಂಚಿಕೆ, ಕ್ರಿಯಾಶೀಲತೆ ಒಳನೋಟ ಪುಸ್ತಕ ಬಿಡುಗಡೆಗೊಳಿಸುವರು.

ಸರ್ವಾಧ್ಯಕ್ಷ ಡಾ. ಜೆ.ಕೆ.ರಮೇಶ್ ಅವರ ಇಂಡಿಯಾದ ಹೊರಗೊಂದು ಹಣಕು ಕೃತಿ ಹಾಗೂ ಬಿ.ಚಂದ್ರೇಗೌಡರ ದೇಶಾಂತರ

ಕಾದಂಬರಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಬಿಡುಗಡೆಗೊಳಿಸುವರು. ಕಸಾಪ ಅಧ್ಯಕ್ಷ ಡಾ.

ಮಹೇಶ್ ಜೋಷಿ ದತ್ತಿನಿಧಿ ಸ್ವೀಕಾರ ಮಾಡುವರು.

ಅಮಿನ್‌ಮಟ್ಟು ಸಮಾರೋಪ ನುಡಿ: ಫೆ.7ರಂದು ಸಂಜೆ 6ಕ್ಕೆ ಚಿಂತಕ ದಿನೇಶ್ ಅಮಿನ್‌ಮಟ್ಟು ಸಮಾರೋಪ ನುಡಿಗಳನ್ನಾಡುವರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಮ್ಮೇಳನಾಧ್ಯಕ್ಷರಿಗೆ ಅಭಿನಂದಿಸುವರು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಶಾಸಕ ಬಿ.ಕೆ.ಸಂಗಮೇಶ್ವರ,

ಬಿ.ವೈ.ವಿಜಯೇಂದ್ರ, ಎಂಎಲ್‌ಸಿ ಬಲ್ಕೀಶ್ ಬಾನು, ಡಿಸಿ ಗುರುದತ್ತ ಹೆಗಡೆ, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಎನ್.ಹೇಮಂತ್  ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಡಿ.ಮಂಜುನಾಥ ಹೇಳಿದರು. ಎಂ.ನವೀನ್‌ಕುಮಾರ್, ಎಂ.ಎಂ.ಸ್ವಾಮಿ, ನಾಗರಕೋಡಿಗೆ ಗಣೇಶಮೂರ್ತಿ, ಡಿ.ಗಣೇಶ್, ಹುಚ್ಚರಾಯಪ್ಪ, ಮಧುಸೂದನ್ ಐತಾಳ್, ಕೃಷ್ಣಮೂರ್ತಿ ಹಿಳ್ಳೋಡಿ, ಭಾರತಿ ರಾಮಕೃಷ್ಣ, ಅನುರಾಧ, ಮಂಜುನಾಥ ಕಾಮತ್, ಬಾಲರಾಜ್, ಜಿ.ವಿ.ಸಂಗಮೇಶ್ವರ, ಮಾರ್ಷಲ್ ಶರಾಂ ಸುದ್ದಿಗೋಷ್ಠಿಯಲ್ಲಿದ್ದರು.