ನ್ಯೂಸ್

ಮುಖ್ಯಮಂತ್ರಿಗಳಿoದ ರೈತರಿಗೆ ಸಹಾಯಧನದ ಬಿತ್ತನೆ ಬೀಜ ವಿತರಣೆ

ಮೈಸೂರು: ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯ ಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರು ಕೃಷಿ ಇಲಾಖೆಯ ಮುಂಖಾoತರ ರೈತರಿಗೆ ಸಹಾಯಧನದಲ್ಲಿ ವಿತರಿಸುವ ಬಿತ್ತನೆ ಬೀಜವನ್ನು ಸಾಂಕೇತಿಕವಾಗಿ ಕೆ-ಕಿಸಾನ್ ತಂತ್ರಾoಶದ ಮುಖಾಂತರ ಮೈಸೂರು ಅಥಿತಿ ಗೃಹದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಕೃಷಿ ಸಚಿವರು ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಸೇರಿದಂತೆ ಮೈಸೂರು ಜಿಲ್ಲೆಯ ವಿಧಾನ ಸಭಾ ಸದಸ್ಯರು ಉಪಸ್ಥಿತರಿದ್ದರು.