ನ್ಯೂಸ್

ನಾದಸ್ವರ ಕಲಾವಿದರಿಗೆ ಪಡಿತರ ಕಿಟ್ ವಿತರಣೆ

ಸರಗೂರು: ಶಾಸಕರು ತಮ್ಮ ಸ್ವಂತ ಹಣದಲ್ಲಿ ಆಹಾರ ಪದಾರ್ಥಗಳ ಕಿಟ್ ಖರೀದಿಸಿ ನೀಡಿದ್ದು, ಅದನ್ನು ಹಂಚಲಾಗುತ್ತಿದೆ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾದಸ್ವರ ಕಲಾವಿದರಿಗೆ ಪಡಿತರ ಕಿಟ್ ಮಾತನಾಡಿದ ಅವರು, ಸಾಂಸ್ಕೃತಿಕ ಶ್ರೀಮಂತಿಕೆ ದೇಶದ ಸಂಪತ್ತು, ನಾದಸ್ವರ ತಲೆತಲಾಂತರದಿಂದ ಬಂದ ಕಲೆಯಾಗಿದ್ದು ಇದನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಯೋಗೀಶ್, ಮುಖ್ಯಾಧಿಕಾರಿ ವೀಣಾ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಚಿಕ್ಕವೀರನಾಯಕ, ಕಲಾವಿದರ ಸಂಘದ ಅಧ್ಯಕ್ಷ ಭೀಮಯ್ಯ, ಮುಖಂಡ ಬಿಲ್ಲಯ್ಯ ಇದ್ದರು.