ಸೊರಬದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಶ್ರೀಕಾಂತ್, ನೆಹರು, ಶಿವಕುಮಾರ್, ಸುಧಾ ಇತರರಿದ್ದರು. 
ನ್ಯೂಸ್

ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಸೊರಬ: ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಅಗತ್ಯವಿರುವ ಪೂರಕ ಸಾಮಗ್ರಿಗಳನ್ನು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು ಎಂದು ಟೀಮ್ ಮಧು ಬಂಗಾರಪ್ಪ ಬಳಗದ ಸದಸ್ಯ ಶ್ರೀಕಾಂತ್ ಚಿಕ್ಕಶಕುನ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ನೀಡ್ ಬೇಸ್ ಸಂಸ್ಥೆ ಮತ್ತು ಟೀಮ್ ಮಧು ಬಂಗಾರಪ್ಪ ಬಳಗದಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿ, ಶಾಲಾ ಮಕ್ಕಳಿಗೆ ಅನುಕೂಲ ಒದಗಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.

ಬಳಗದ ಸದಸ್ಯ ನೆಹರು ಕೊಡಕಣಿ ಮಾತನಾಡಿ, ಸಮಾಜದಲ್ಲಿ ಸೇವಾ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಬೇಕು ಎಂದರು. ಶಿಕ್ಷಣ ಇಲಾಖೆಯ ಬಿಟಿಇಆರ್‌ಐ ಅಧಿಕಾರಿ ಶಿವಕುಮಾರ್, ರೋಹಿತ್ ಎಸ್.ಕಂಠಿ, ಸಿಆರ್‌ಸಿ ಸುಧಾ, ಮುಖ್ಯಶಿಕ್ಷಕಿ ಗೀತಾ, ಅರುಣ್ ಇತರರಿದ್ದರು.