ಕಾಸರಗೋಡು: ಕೆಎಂಸಿ ವತಿಯಿಂದ ಆರಂಭಿಸಲಾಗಿರುವ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯನ್ವಯ, ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ಕಾರ್ಡ್ ವಿತರಣೆ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆಯಿತು.
ಎಲ್ಲ ಸಮುದಾಯದ ಜನತೆಗೆ ಕೈಗೆಟಕುವ ವೆಚ್ಚದಲ್ಲಿ, ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯನ್ನು ಆರಂಭಿಸಲಾಗಿದೆ. ಆರೋಗ್ಯ ಕಾರ್ಡ್ ಯೋಜನೆಯಲ್ಲಿ ಒಳಗೊಂಡು ಕಾರ್ಡ್ ಹೊಂದಿದಲ್ಲಿ ರಿಯಾಯಿತಿ ಸೌಲಭ್ಯಗಳೊಂದಿಗೆ, ಪತ್ರಿಕಾ ಮತ್ತು ಮಾಧ್ಯಮ ಸದಸ್ಯರಿಗೆ ಉತ್ತಮ ಆರೋಗ್ಯ ಹಾರೈಸುವ ಸೂಚಕವಾಗಿ ಮಣಿಪಾಲ್ ಆರೋಗ್ಯ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಕೆಎಂಸಿ ಅಧಿಕಾರಿಗಳು ತಿಳಿಸಿದರು.
ಕಾಸರಗೋಡು ಪ್ರೆಸ್‌ಕ್ಲಬ್ ಉಪಾಧ್ಯಕ್ಷ ನಹಾಸ್ ಪಿ. ಕಾರ್ಡ್ ವಿತರಣೆಗೆ ಚಾಲನೆ ನೀಡಿದರು. ಪ್ರೆಸ್‌ಕ್ಲಬ್‌ನ ನಿಯೋಜಿತ ಪ್ರಧಾನ ಕಾರ್ಯದರ್ಶಿ ಪ್ರದೀಪ್ ನಾರಾಯಣನ್, ಉಪಾಧ್ಯಕ್ಷ ಅಬ್ದುಲ್ಲಕುಞಿ ಉದುಮ, ಜತೆಕಾರ್ಯದರ್ಶಿ ಪುರುಷೋತ್ತಮ್ ಪೆರ್ಲ, ಕೆಎಂಸಿ ಮಾರ್ಕೆಟಿಂಗ್ ವಿಭಾಗದ ಉದಯಕುಮಾರ್, ಕಾರ್ತಿಕ್ ನಾಯಕ್ ಉಪಸ್ಥಿತರಿದ್ದರು.