ಕೆಪಿಎಸ್‌ನ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳಿಗೆ ಸಾಂಕೇತಿಕವಾಗಿ ಶೂ, ಸಾಗ್ಸ್, ಪಾದರಕ್ಷೆಗಳನ್ನು ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ನಶೆಟ್ಟಿ ವಿತರಿಸಿದರು. ಕೆ.ಎ.ಅಬೂಬಕರ್, ಟಿ.ಪಿ.ಸುಧಾಕರ್,ಟಿ.ಪಿ.ಸುಧಾಕರ್ ಇದ್ದರು. 
ನ್ಯೂಸ್

ಮಕ್ಕಳಿಗೆ ಪಾದರಕ್ಷೆ ವಿತರಣೆ

ಎನ್.ಆರ್.ಪುರ: ಸರ್ಕಾರದ ಸೌಲಭ್ಯಗಳನ್ನು ಮಕ್ಕಳು ಉಪಯೋಗಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೆಪಿಎಸ್ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಲಕ್ಷ್ಮಣಶೆಟ್ಟಿ ತಿಳಿಸಿದರು.
ಅವರು ಕೆಪಿಎಸ್‌ನ ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 780 ಮಕ್ಕಳಿಗೆ ಶೂ, ಪಾದರಕ್ಷೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಲು ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿ ಕೋಟ್ಯಂತರ ರೂ. ವ್ಯಯಿಸುತ್ತಿದೆ ಎಂದರು.
ಪ್ರೌಢಶಾಲಾ ವಿಭಾಗದ ಪ್ರಭಾರಿ ಉಪ ಪ್ರಾಚಾರ್ಯ ಸಂದೀಪ್‌ಕುಮಾರ್, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಾವಿತ್ರಿ, ದಾನಿಗಳಾದ ರವಿಶಂಕರ್, ಎಸ್‌ಡಿಎಂಸಿ ಶೈಕ್ಷಣಿಕ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎ.ಅಬೂಬಕರ್, ಎಸ್‌ಡಿಎಂಸಿ ಸದಸ್ಯರಾದ ಟಿ.ಪಿ. ಸುಧಾಕರ್,ದೇವೇಂದ್ರ, ಶಕುಂತಲ, ವಿಜು, ಕೆ.ಎಸ್.ವಾಗ್ದೇವಿ,, ಎಸ್.ಆರ್.ಕಿರಣ್ ಉಪಸ್ಥಿತರಿದ್ದರು.