ಕಣಗಾಲು ಗ್ರಾಮದಲ್ಲಿ ರೈತರಿಗೆ ಪಶು ಮೇವಿನ ಕಿಟ್‌ಗಳನ್ನು ಡಾ.ಚಾಮರಾಜು ವಿತರಿಸಿದರು. ಮೈಮುದ್ದೀನ್, ರವಿ, ನಟೇಶ ಇದ್ದರು. 
ನ್ಯೂಸ್

ರೈತರಿಗೆ ಮೇವಿನ ಕಿಟ್‌ಗಳ ವಿತರಣೆ

ಬೈಲಕುಪ್ಪೆ: ಜಾನುವಾರುಗಳನ್ನು ಸಾಕಿರುವ ರೈತರಿಗೆ ಶನಿವಾರ ಮೇವಿನ ಕಿಟ್‌ಗಳನ್ನು ವಿತರಿಸಲಾಯಿತು.

ಪಿರಿಯಾಪಟ್ಟಣ ತಾಲೂಕಿನ ಕಣಗಾಲು ಗ್ರಾಮದ ಪಶುವೈದ್ಯ ಆಸ್ಪತ್ರೆಯ ಆವರಣದಲ್ಲಿ ರೈತರಿಗೆ ಕಿರು ಕಿಟ್‌ಗಳನ್ನು ವಿತರಿಸಿದ ಡಾ ಚಾಮರಾಜು ಮಾತನಾಡಿ, ಕಿಟ್‌ನಲ್ಲಿ 5 ಕೆಜಿ ಜೋಳವಿದ್ದು, ಪಶುಗಳ ಆಹಾರಕ್ಕಾಗಿ ಉಪಯೋಗಿಸುವ ಜೋಳ ಇದಾಗಿದೆ. ಫಲ ಕೊಡುವ ಜೋಳ ಅಲ್ಲ. ಪಶು ಆಹಾರಕ್ಕಾಗಿ ಬೆಳೆಯುವ ಈ ಜೋಳದ ಬಿತ್ತನೆಗೆ ನೀರಾವರಿ ಇದ್ದರೆ ಉತ್ತಮ. ಈ ಪಶು ಆಹಾರದಿಂದ ಗುಣಮಟ್ಟದ ಹೆಚ್ಚಿನ ಹಾಲು ಬರಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಕಣಗಾಲು, ಮನುಗನಹಳ್ಳಿ, ಪಿ.ಬಸವನಹಳ್ಳಿ ಸೇರಿದಂತೆ ಒಂಬತ್ತು ಹಳ್ಳಿಗಳಿಗೆ 70 ಕಿಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು. ಕಣಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೈಮುದ್ದೀನ್, ಉಪಾಧ್ಯಕ್ಷ ರವಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಟೇಶ, ರಾಮೇಗೌಡ, ಮೋಹನ್ ಮತ್ತಿತರರು ಹಾಜರಿದ್ದರು.