ಸೈದೂರು ಗ್ರಾಪಂನ ಸುಳ್ಳೂರು ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾಗಿರುವ ಕಲ್ಲು-ಮಣ್ಣು ಮಿಶ್ರಿತ ರಾಗಿ.  
ನ್ಯೂಸ್

ಕಲ್ಲು-ಮಣ್ಣು ಮಿಶ್ರಿತ ರಾಗಿ ವಿತರಣೆ

ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಸಾಗರ: ತಾಲೂಕಿನ ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳ್ಳೂರು ನ್ಯಾಯಬೆಲೆ ಅಂಗಡಿ ವ್ಯಾಪ್ತಿಯ ಪಡಿತರದಾರರಿಗೆ ವಿತರಿಸಿದ ರಾಗಿಯಲ್ಲಿ ಮಣ್ಣು, ಕಲ್ಲಿನ ಚೂರುಗಳು ಸಿಕ್ಕಿವೆ.

ಅಕ್ಟೋಬರ್‌ನ ಪಡಿತರ ವಿತರಣೆ ಸಂದರ್ಭದಲ್ಲಿ ಕೆಲ ಲಾನುಭವಿಗಳಿಗೆ ತಲಾ 12 ಕೆ.ಜಿ ರಾಗಿ ವಿತರಿಸಲಾಗಿದೆ. ಆದರೆ ಮಣ್ಣು ಮಿಶ್ರಿತ ರಾಗಿ ವಿತರಣೆ ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಸಿರುವ ಸಾಗರ ತಾಲೂಕು ಕಚೇರಿ ಆಹಾರ ನಿರೀಕ್ಷಕ ಯೋಗೀಶ್, ನಮ್ಮ ಹಾಗೂ ಸೊರಬ ತಾಲೂಕಿನ ಕೆಲವು ಸೊಸೈಟಿಗಳಿಗೆ ಈ ರೀತಿಯ ರಾಗಿ ಪೂರೈಕೆಯಾಗಿದೆ. ರಾಗಿಯೂ ಚಿಕ್ಕಮಗಳೂರು ಜಿಲ್ಲೆಯಿಂದ ಟೆಂಡರ್ ಮೂಲಕ ಬಂದಿದ್ದು, ನಮ್ಮ ಇಲಾಖೆ ಜಿಲ್ಲಾ ಅಧಿಕಾರಿಗಳ ಗಮನಕ್ಕೂ ತಂದಿದ್ದೇವೆ. ಇದನ್ನು ಕೂಡಲೇ ವಾಪಸ್ ಮಾಡಲು ಕೂಡ ನಮಗೆ ಸೂಚಿಸಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ರಾಗಿ ಬದಲು ಬದಲು ಅಕ್ಕಿಯನ್ನೇ ವಿತರಿಸಲು ಕೋರಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.