ಭಾನುವಾರ ಊರಿನ ಪ್ರಮುಖ ಬೀದಿಗಳಲ್ಲಿ ಶ್ರೀ ಸ್ವರ್ಣಗೌರಿಯನ್ನು ಮೆರವಣಿಗೆ ಮಾಡಿದ ನಂತರ ಊರ ಮುಂದಿನ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. 
ನ್ಯೂಸ್

ಕಲ್ಗುಂಡಿ ಗ್ರಾಮದಲ್ಲಿ ಶ್ರೀ ಸ್ವರ್ಣಗೌರಿ ವಿಸರ್ಜನೆ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಕಲ್ಗುಂಡಿ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಶ್ರೀ ಸ್ವರ್ಣಗೌರಿಯನ್ನು ಭಾನುವಾರ ವಿಸರ್ಜನೆ ಮಾಡಲಾಯಿತು.

ಇತ್ತೀಚೆಗೆ ಗ್ರಾಮದಲ್ಲಿ ಶ್ರೀ ಗೌರಮ್ಮನನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ನಿತ್ಯ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾ ಬರಲಾಗಿತ್ತು. ಶ್ರೀ ಸ್ವರ್ಣ ಗೌರಿಯನ್ನು ಪ್ರತಿಷ್ಠಾಪಿಸಿದ ನಂತರ ಭಾನುವಾರ ಶ್ರೀ ಕಲ್ಲುಕೋಡಮ್ಮ ಮತ್ತು ಶ್ರೀ ವೀರಭದ್ರ ದೇವರ ಸಮ್ಮುಖದಲ್ಲಿ ಗುಗ್ಗುಳ ಸೇವೆ, ಮಡಿಲಕ್ಕಿ ಸೇವೆಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವದೊಂದಿಗೆ ಊರ ಮುಂದಿನ ಕೆರೆಯಲ್ಲಿ ಗೌರಮ್ಮನನ್ನು ವಿಸರ್ಜನೆ ಮಾಡಲಾಯಿತು. ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಬಂದಂತ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು