ನ್ಯೂಸ್

ದಿಶಾ ಭಾರತ 20ನೇ ವರ್ಷಾಚರಣೆ ಸಂಭ್ರಮ; ಫೆ.24ಕ್ಕೆ ಕಾರ್ಯಕ್ರಮ

ಬೆಂಗಳೂರು : ಮೌಲ್ಯಾಧಾರಿತ ಶಿಕ್ಷಣ ನೀಡುವುದು ಮತ್ತು ಯುವಕರಿಗೆ ಸಮಗ್ರ ಅಭಿವೃದ್ಧಿಯ ಬಗ್ಗೆ ಉತ್ತಜನ ನೀಡುವ ಗುರಿಯೊಂದಿಗೆ ಕೆಲಸ ಮಾಡುತ್ತಿರುವ ದಿಶಾ ಸಂಸ್ಥೆಯು ತನ್ನ 20ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಫೆ.24ಕ್ಕೆ ಆರ್‌ವಿ ಟೀಚರ್ಸ್‌ ಕಾಲೇಜಿನ ಸಭಾಂಗಣದಲ್ಲಿ ‘ಸಂಭ್ರಮ’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದಿಶಾ ಭಾರತ ಸಂಸ್ಥಾಪಕಿ ರೇಖಾ ರಾಮಚಂದ್ರನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮದ ಅಂಗವಾಗಿ ಭಾರತೀಯ ಇತಿಹಾಸದಿಂದ ನೈತಿಕತೆ ಮತ್ತು ಜೀವನಾದರ್ಶಗಳು ಎಂಬ ವಿಷಯದ ಕುರಿತು ಒಂದು ತಿಂಗಳ ಉಪನ್ಯಾಸ ಮಾಲಿಕೆ, ಶಿಕ್ಷಣ ತಜ್ಞರ ವಿಚಾರ ಗೋಷ್ಠಿ, ಮೆಗಾ ಯುವ ಸಮಾವೇಶ, ಮೌಲ್ಯ ಶಿಕ್ಷಣ ಕುರಿತು ರಾಷ್ಟ್ರೀಯ ಸಮಾವೇಶ, ಎನ್‌ಎಸ್‌ಎಸ್ ಸಂಶೋಜಕರ ಸಮಾಗಮ, ಯುವಜನರ ಸಬಲೀಕರಣಕ್ಕೆ ದುಡಿಯುತ್ತಿರುವ ಸಂಸ್ಥೆಗಳ ಸಮ್ಮೇಳನ, ಕೌಶಲ್ಯಾಭಿವೃದ್ಧಿ ಕಾರ್ಯಾಗಾರ, ಮೇರಾ ಭಾರತ್ ಮಹಾನ್ ಎಂಬ ವಿಷಯದ ಕುರಿತು ರಸಪ್ರಶ್ನೆ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಆನ್‌ಲೈನ್ ಕೋರ್ಸ್ ಆರಂಭ, ಶಿಕ್ಷಕರು ಮತ್ತು ಪೋಷಕರಿಗೆ ಪ್ರತ್ಯೇಕ ಕಾರ್ಯಾಗಾರ, ರಾಷ್ಟ್ರ ನಿರ್ಮಾಣದ ರೂವಾರಿಗಳು ಎಂಬ ವಿಷಯದ ಕುರಿತು ಯುವಜನರಿಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ದಿಶಾ ಭಾರತ ಸಂಯೋಕರಾದ ಸ್ನೇಹ ದಾಮ್ಲೆ, ಲಾವಣ್ಯ, ಸ್ಮತಿ ಖರೆ ಉಪಸ್ಥಿತರಿದ್ದರು.