ನ್ಯೂಸ್

ಆರ್‌ಎನ್‌ಆರ್ ತಳಿಯಲ್ಲಿ ರೋಗ ನಿರೋಧಕ ಶಕ್ತಿ

ಮೂಗೂರು: ಆರ್‌ಎನ್‌ಆರ್ ಭತ್ತದ ತಳಿ ರೋಗ ನಿರೋಧಕ ಶಕ್ತಿಯ ಗುಣ ಹೊಂದಿರುವುದರಿಂದ ಸಕಾಲದಲ್ಲಿ ಭತ್ತದ ಪೈರುಗಳನ್ನು ಕೀಟಬಾಧೆಯಿಂದ ಸಂರಕ್ಷಿಸುವ ಸಾಮರ್ಥ್ಯ ಹೊಂದಿದೆ ಎಂದು ರೈಜ್ ಅಗ್ರಿ ಜೆನಿಟಿಕ್ಸ್ ಪೈ.ಲಿ.ನ ಕ್ಷೇತ್ರಾಧಿಕಾರಿ ಆರ್.ಇ. ತಿಪ್ಪೇಸ್ವಾಮಿ ಹೇಳಿದರು.

ಮೂಗೂರು ಗ್ರಾಮದ ರಾಜು ಅವರ ಜಮೀನಿನಲ್ಲಿ ರೈಜ್ ಅಗ್ರಿ ಜೆನಿಟಿಕ್ಸ್ ಪೈ.ಲಿ. ವತಿಯಿಂದ ಶನಿವಾರ ಆಯೋಜಿಸಿದ್ದ ಆರ್‌ಎನ್‌ಆರ್ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಆರ್‌ಎನ್‌ಆರ್ ಭತ್ತದ ಬಿತ್ತನೆ ಬೀಜ ಉತ್ತಮ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳವುದರ ಜತೆಗೆ ಹೊಸ ತಾಂತ್ರಿಕತೆ ಮೂಲಕ ಸಂಸ್ಕರಣೆ ಮಾಡಲಾಗಿದೆ. ಇದು ಅಲ್ಪಾವಧಿ ಬೆಳೆಯಾಗಿದ್ದು, ಕಡಿಮೆ ನೀರು, ರಾಸಾಯನಿಕ ಗೊಬ್ಬರದ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದಾಗಿದೆ ಎಂದರು.

ಆರ್‌ಎನ್‌ಆರ್ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ನೂರಾರು ರೈತರು ಭಾಗವಹಿಸಿ ಭತ್ತದ ಬೆಳೆಯನ್ನು ವೀಕ್ಷಿಸಿದರು. ರೈತ ರಾಜು ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಲಕ್ಷ್ಮೀ ವೆಂಕಟೇಶ್ವರ ಟೇಡ್ರರ್ ಮಾಲೀಕ ವಿಶ್ವನಾಥ್, ಮೂಗೂರು ಟ್ರೇಡರ್ಸ್‌ನ ಎಚ್.ಎಸ್.ಯೋಗೇಶ್ ಇತರರು ಉಪಸ್ಥಿತರಿದ್ದರು.