ನ್ಯೂಸ್

ಡಿಜಿಟಲ್ ವೇದಿಕೆ ಬಲವರ್ಧನೆಗೆ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ | Discuss with coin team

ಬೆಂಗಳೂರು: ರಾಜ್ಯದಲ್ಲಿ ಸಾರ್ವನಿಕರಿಗೆ ಸೇವೆ ಒದಗಿಸುತ್ತಿರುವ ಡಿಜಿಟಲ್ ವೇದಿಕೆ ಬಲವರ್ಧನೆ ಕುರಿತು ಅಮೆರಿಕ ಮೂಲದ ಕಾಯಿನ್ ಕಂಪನಿ ಪ್ರತಿನಿಧಿಗಳ ತಂಡದ ಜತೆಗೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಚರ್ಚಿಸಿದ್ದಾರೆ.

ಸಚಿವರು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಬುಧವಾರ ಸಂದೇಶ ಹಂಚಿಕೊಂಡಿದ್ದಾರೆ. ಬ್ಲಾಕ್‌ಚೈನ್ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಮತ್ತಷ್ಟು ಸರಳೀಕರಣದ ಮುಖೇನ ಡೆವಲಪರ್ಸ್ ಅನುವು ಮಾಡಿಕೊಡಲು, ಸೈಬರ್ ಸೆಕ್ಯುರಿಟಿ ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಹಭಾಗಿತ್ವದ ಕುರಿತು ಮಾತುಕತೆಯಲ್ಲಿ ಪ್ರಸ್ತಾಪವಾಗಿದೆ.

ಅಲ್ಲದೆ, ನೈಪುಣ್ಯತೆ ಹಾಗೂ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳು, ಭವಿಷ್ಯದಲ್ಲಿ ಜಂಟಿಯಾಗಿ ಹೆಕಥಾನ್‌ಗಳ ಆಯೋಜನೆ, ಪರಿಪೋಷಣ ಕೇಂದ್ರಗಳ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅಮೆರಿಕ ಮೂಲದ ಕಾಯಿನ್ ಕಂಪನಿಯು 100 ದೇಶಗಳಲ್ಲಿ ಕಾರ್ಯಜಾಲ ಹೊಂದಿದೆ. ಡಿಜಿಟಲ್ ಆಸ್ತಿವಹಿವಾಟು, ಅಧಿಕೃತ ಬಿಟ್‌ಕಾಯಿನ್ ವ್ಯವಹಾರದಲ್ಲಿ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ.