ನ್ಯೂಸ್

ಪ್ರಧಾನಿ ನರೇಂದ್ರ ಮೋದಿ- ಡಾ.ವಿಜಯ ಸಂಕೇಶ್ವರ ಚರ್ಚೆ

ನವದೆಹಲಿ: ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ಉದ್ಯಮಿಗಳೊಂದಿಗೆ ಸರಣಿ ವಿಚಾರವಿನಿಮಯ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೆಹಲಿಯ ತಮ್ಮ ಕಾರ್ಯಾಲಯದಲ್ಲಿ ವಿಆರ್​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ವಿಜಯ ಸಂಕೇಶ್ವರ ಅವರೊಂದಿಗೆ ರ್ಚಚಿಸಿದರು.

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ), ದೇಶದ ಪ್ರಸ್ತುತ ಆರ್ಥಿಕ ಸನ್ನಿವೇಶ, ಕೈಗಾರಿಕಾ ರಂಗದ ಸ್ಥಿತಿಗತಿ ಮುಂತಾದ ಸಂಗತಿಗಳ ಕುರಿತು ಇಬ್ಬರೂ ಚರ್ಚೆ ನಡೆಸಿದರು. ಡಾ.ವಿಜಯ ಸಂಕೇಶ್ವರ ಅವರು ಈ ಸಂದರ್ಭದಲ್ಲಿ ಆರ್ಥಿಕತೆ, ಉದ್ಯಮ ವಿಷಯಗಳ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡು ಕೆಲ ಸಲಹೆಗಳನ್ನೂ ಮುಂದಿಟ್ಟರು. ಅಲ್ಲದೆ, ಒಟ್ಟಾರೆ ಉದ್ಯಮರಂಗದ ಹಿತದೃಷ್ಟಿಯಿಂದ ಕೆಲ ಮನವಿಗಳನ್ನೂ ಮಾಡಿಕೊಂಡರು. ಉದ್ಯಮದಲ್ಲಿ ದಶಕಗಳ ಅನುಭವವಿರುವ ಸಂಕೇಶ್ವರರ ಅಭಿಪ್ರಾಯಗಳಿಗೆ ಪ್ರಧಾನಿ ಮೋದಿಯವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.