ಬೆಂಗಳೂರು: ವಿಧಾನ ಪರಿಷತ್ ಸಚಿವಾಲಯದ ಅದಿಕಾರಿ/ನೌಕರರು ರಜೆ ತೆರಳುವ ಮುನ್ನ ಮೇಲಧಿಕಾರಿಗಳ ಪೂರ್ವಾನುಮತಿಯನ್ನು ಕಡ್ಡಾಯ(Prior approval of superiors is mandatory before going on leave) ವಾಗಿ ಪಡೆಯುವಂತೆ ಸೂಚಿಸಲಾಗಿದೆ.
ಒಂದು ವೇಳೆ ಕಚೇಗೆ ಅನಧಿಕೃತವಾಗಿ ಅಧಿಕಾರಿ/ನೌಕರರು ಗೈರುಹಾಜರಾದಲ್ಲಿ ಅಂತಹ ಸಿಬಂದಿ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ವಿಧಾನ ಪರಿಷತ್ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದಾರೆ.
ಸರ್ಕಾರಿ ನೌಕರರು ರಜೆ ಪಡೆಯದೆ ಅನಧಿಕೃತವಾಗಿ ಕೆಲಸಕ್ಕೆ ಗೈರಾಗುವುದು ದುರ್ನಡತೆ ತೋರಿದಂತೆ. ಹಾಗಾಗಿ ಅಂತಹ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದು ಎಂದು ರಾಜ್ಯ ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿರುವುದನ್ನೂ ಸುತ್ತೋಲೆಯಲ್ಲಿ ನೆನಪಿಸಲಾಗಿದೆ.