ನ್ಯೂಸ್

50 ಲಕ್ಷ ರೂ. ಕೊಟ್ರೆ ಸಾಕು ಬಂದು... ನಟಿಯರ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ಖ್ಯಾತ ನಿರ್ದೇಶಕ

ಹೈದರಾಬಾದ್: ಮಲಯಾಳಂ ಸಿನಿಮಾರಂಗದ ನಟಿಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಗರಣದ ವಿವಾದ ದಿನೇದಿನೆ ತೀವ್ರಗೊಳ್ಳುತ್ತಿದ್ದು, #MeToo ಅಭಿಯಾನವು ದೇಶಾದ್ಯಂತ ಹೊಸ ಅಲೆಯನ್ನ ಸೃಷ್ಟಿಸಿದೆ. ಹಿರಿಯ ನಿರ್ದೇಶಕರು, ನಿರ್ಮಾಪಕರು ಮತ್ತು ನಟರ ಕೈಯಲ್ಲಿ ತಾವು ಅನುಭವಿಸಿದ ದೌರ್ಜನ್ಯದ ಕುರಿತು ನಟಿಯರು ಮೌನ ಮುರಿಯುತ್ತಿದ್ದಾರೆ. ಹೇಮಾ ಸಮಿತಿ ವರದಿ ಸಲ್ಲಿಸಿದ ಬೆನ್ನಲ್ಲೇ ಬೇರೆ ಚಿತ್ರರಂಗಗಳ ನಟ-ನಟಿಯರು ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುತ್ತಿದ್ದು, ಇದು ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಹೇಮಾ ಸಮಿತಿ ವರದಿ ಸಲ್ಲಿಸಿದ ಬೆನ್ನಲ್ಲೇ ಪರಭಾಷೆ ಚಿತ್ರರಂಗದ ಪರಿಸ್ಥಿತಿಗಳ ಬಗ್ಗೆಯೂ ವರದಿ ಸಲ್ಲಿಸುವಂತೆ ಅಲ್ಲಿನ ನಟ-ನಟಿಯರು ಆಗ್ರಹಿಸುತ್ತಿದ್ದು, ಈ ವಿಚಾರವನ್ನೇ ಮುಂದಿಟ್ಟುಕೊಂಡು ಕೆಲ ನಟರು, ನಿರ್ದೇಶಕರು, ನಿರ್ಮಾಪಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುತ್ತಿದ್ದಾರೆ. ಇದೀಗ ಟಾಲಿವುಡ್​ನ ಖ್ಯಾತ ನಿರ್ದೇಶಕ ಗೀತಾ ಕೃಷ್ಣ ನಟಿಯರ ಬಗ್ಗೆ ಮಾತನಾಡುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಹಲವರು ಇವರ ಹೇಳಿಕೆಯನ್ನು ಖಂಡಿಸಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಿರ್ದೇಶಕ ಗೀತಾ ಕೃಷ್ಣ, ಇತ್ತೀಚಿನ ವರ್ಷಗಳಲ್ಲಿ ಟಾಲಿವುಡ್​ನಲ್ಲಿ ಡ್ರಗ್ಸ್​ ಬಳಕೆ ಹೆಚ್ಚಾಗಿದ್ದು, ಖ್ಯಾತ ನಟ-ನಟಿಯರು ಡ್ರಗ್ಸ್​ಗೆ ದಾಸರಾಗಿದ್ದಾರೆ. ರವಿತೇಜ ಸಹೋದರ ಕೂಡ ಡ್ರಗ್ಸ್​ಗೆ ದಾಸನಾಗಿದ್ದ. ಅದಕ್ಕೆ ಆತ ಮೃತಪಟ್ಟಾಗ ರವಿತೇಜ ನೋಡಲು ಸಹ ಹೋಗಿರಲಿಲ್ಲ. ಡ್ರಗ್ಸ್ ಎಂಬುದು ಶ್ರೀಮಂತ ಜನರ ಮೋಜಿನ ವಸ್ತು, ಬಡವರಿಗೆ, ಮಧ್ಯಮ ವರ್ಗದವರಿಗೆ ಅದು ಎಟುಕುವುದಿಲ್ಲ ಹಾಗಾಗಿ ಅವರು ಸೇಫ್ ಆಗಿದ್ದಾರೆ. ಚಿತ್ರರಂಗದಲ್ಲಿ ಡ್ರಗ್ಸ್ ಅನ್ನು ಉದ್ಯಮ ಮಾಡಿಕೊಂಡಿದ್ದಾರೆ. ಕೋಟ್ಯಂತರ ರೂಪಾಯಿಗಳಿಗೆ ಡ್ರಗ್ಸ್ ಅನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಸಿನಿಮಾಗಳಲ್ಲಿ ರೊಮ್ಯಾನ್ಸ್​ ಸೀನ್​ ವಿಚಾರವಾಗಿ ಮಾತನಾಡಿರುವ ಗೀತಾ, ನಟಿಯರಿಗೆ ಮಾಹಿತಿ ನೀಡದೆ ಅಂಥಹಾ ದೃಶ್ಯಗಳನ್ನು ತೆಗೆಯಲು ಸಾಧ್ಯವಿಲ್ಲ. ಯಾವ ನಟಿಗೂ ಸಹ ಬಲವಂತ ಮಾಡಿ ರೊಮ್ಯಾಂಟಿಕ್ ಸೀನ್​ಗಳಲ್ಲಿ ನಟಿಸುವಂತೆ ಮಾಡಲಾಗುವುದಿಲ್ಲ. ಒಂದು ವೇಳೇ ಹಾಗೆ ಮಾಡಿದರೆ ನಟಿ ಎಲ್ಲರ ಮುಂದೊಂದು ದಿನ ಇದನ್ನು ಬಹಿರಂಗ ಮಾಡುತ್ತಾಳೆ. ಈಗಲ್ಲದಿದ್ದರೂ ಮುಂದೆ ಯಾವಾಗಲಾದರೂ ಆ ವಿಷಯ ಬಹಿರಂಗ ಆಗಿಯೇ ಆಗುತ್ತದೆ ಎಂದಿದ್ದಾರೆ.

ಇನ್ನು ಅಫೇರ್​ಗಳ ಕುರಿತು ಮಾತನಾಡಿರುವ ಗೀತ, ಇತ್ತೀಚಿನ ವರ್ಷಗಳಲ್ಲಿ ಅಫೇರ್​ಗಳು ಬಹಳ ಕಾಮನ್​ ಆಗಿವೆ. ತೆಲುಗು ಚಿತ್ರರಂಗದಲ್ಲಿ ಇದು ಸಾಮಾನ್ಯವಾಗಿದ್ದು, ಯಾರು ಇದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವು ನಟಿಯರಿಗೆ ಕೇವಲ 50 ಲಕ್ಷ ರೂಪಾಯಿ ಕೊಟ್ಟರೆ ಸಾಕು ಬಂದು ಬಿಡುತ್ತಾರೆ. ಕೆಲವು ದೊಡ್ಡ ಅಧಿಕಾರಿಗಳು, ರಾಜಕಾರಣಿಗಳಿಗೆ ನಾಯಕಿಯೊಟ್ಟಿಗೆ ಆತ್ಮೀಯ ಸಂಬಂಧಗಳು ಇವೆ. ಅದನ್ನೇ ಆಧಾರವಾಗಿಟ್ಟುಕೊಂಡು ಕೆಲವು ನಟಿಯರು ಆಸ್ತಿಗಳು ಮಾಡಿಕೊಂಡಿದ್ದಾರೆ ಎಂದು ನಿರ್ದೇಶಕ ಗೀತಾ ಕೃಷ್ಣ ಹೇಳಿದ್ದಾರೆ