- ಹೀರೋ ಆದ ನಿರ್ದೇಶಕರ ಪಟ್ಟಿಗೆ ಮತ್ತೊಬ್ಬರ ಎಂಟ್ರಿ
- ಬಣ್ಣ ಹಚ್ಚಿ ಆ್ಯಕ್ಟಿಂಗ್ ಗಿಳಿದ ಮನೋಜ್ ಪಿ. ನಡಲುಮನೆ
- ರೊಮ್ಯಾಂಟಿಕ್ ಕಾಮಿಡಿ ಜಾನರ್ ಮೂಲಕ ನಾಯಕನಾದ ನಟ
ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಮೊದಲು ನಿರ್ದೇಶಕರಾಗಿ ಗುರುತಿಸಿಕೊಂಡು ಬಳಿಕ ಬಣ್ಣ ಹಚ್ಚಿ ನಾಯಕರಾದವರು ಇದ್ದಾರೆ. ಹಿರಿಯ ನಟ ಕಾಶಿನಾಥ್, ಉಪೇಂದ್ರ, ಎಸ್.ಮಹೇಂದರ್, ‘ಜೋಗಿ’ ಪ್ರೇಮ್ ಹೀಗೆ ಪಟ್ಟಿ ದೊಡ್ಡದಿದೆ. ಇದೀಗ ಈ ಸಾಲಿಗೆ ಮನೋಜ್ ಪಿ. ನಡಲುಮನೆ ಹೊಸ ಸೇರ್ಪಡೆ. ‘ಆನ’, ‘ಮೇರಿ’, ‘ನೀ ನಂಗೆ ಅಲ್ಲವಾ’ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದ ಮನೋಜ್ ಇದೀಗ ‘ಲವ್ ಥಿಯರಿ’ ಮೂಲಕ ನಾಯಕನಾಗುತ್ತಿದ್ದಾರೆ. ಶ್ರೀಮರಳಿ ಅಭಿನಯದ ‘ಉಗ್ರಾಯುಧಮ್’ ನಿರ್ಮಾಪಕ ಜಯರಾಮ್ ದೇವಸಮುದ್ರ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಲವ್ ಥಿಯರಿ’ ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರಲಿದ್ದು, ಮನೋಜ್ ನಟಿಸುವ ಜತೆಗೆ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಸ್ಟ್ ಲುಕ್ ಪೋಸ್ಟರ್ ಮೂಲಕ ಸಿನಿಮಾವನ್ನು ೋಷಿಸಲಾಗಿದೆ. ‘ಈಗಾಗಲೇ ಮೂರು ಚಿತ್ರಗಳನ್ನು ನಿರ್ದೇಶಿಸಿರುವ ನನಗೆ ನಟನಾಗಬೇಕೆಂದ ಆಸೆ ಮೊದಲಿನಿಂದಲೂ ಇತ್ತು. ಇದೀಗ ‘ಲವ್ ಥಿಯರಿ’ ಮೂಲಕ ಸಾಧ್ಯವಾಗಿದೆ. ‘ಲವ್ ಥಿಯರಿ’ ಟೈಟಲ್ ಕೇಳಿದಾಕ್ಷಣ ಇದೊಂದು ಲವ್ ಸ್ಟೋರಿ ಅನಿಸಬಹುದು ಆದರೆ ಅಲ್ಲ. ಮಾನವ ಸಂಬಂಧಗಳನ್ನು ಎತ್ತಿ ಹಿಡಿಯುವ ಕಥೆಯಾಗಿದ್ದು, ರೊಮ್ಯಾಂಟಿಕ್ ಕಾಮಿಡಿ ಮೂಲಕ ನಿರೂಪಿಸಲಾಗುತ್ತಿದೆ. ಮುಂದಿನ ತಿಂಗಳಿನಿಂದ ಬೆಂಗಳೂರು, ಕೊಡಗು ಸೇರಿ ವಿವಿಧೆಡೆ ಚಿತ್ರೀಕರಣ ನಡೆಸಲಾಗುವುದು’ ಎಂದು ಮನೋಜ್ ಮಾಹಿತಿ ನೀಡುತ್ತಾರೆ.