ನ್ಯೂಸ್

ಸ್ಪಂದನಾರ ಅತಿ ದೊಡ್ಡ ಕನಸು ಇದಾಗಿತ್ತು: ಮಾಹಿತಿ ಬಿಚ್ಚಿಟ್ಟ ನಿರ್ದೇಶಕ ಮಹೇಶ್!

ಬೆಂಗಳೂರು: ಇದೀಗ ನಿರ್ದೇಶಕ ಮಹೇಶ್, ಸ್ಪಂದನಾರ ಅತಿ ದೊಡ್ಡ ಕನಸನ್ನು ಬಹಿರಂಗಪಡಿಸಿದ್ದಾರೆ.

ಸ್ಪಂದಾನರ ಸಾವು ಇಡೀ ಸ್ಯಾಂಡಲ್​ವುಡ್​ಅನ್ನೇ ಸೂತಕಕ್ಕೆ ತಳ್ಳಿದೆ. ಈ ಸಂದರ್ಭ ಸ್ಪಂದನಾ ಕುರಿತಾಗಿ ಮಾತನಾಡಿದ ನಿರ್ದೇಶಕ ಮಹೇಶ್​, ಅಪರೂಪದ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಮಹೇಶ್, "ಯಾಕೆ ಪದೇ ಪದೇ ನಮ್ಮ ಕುಟುಂಬಕ್ಕೆ ಅನಾಹುತ ಆಗುತ್ತಿದೆ ಎಂದು ಮುರುಳಿ ಸರ್ ಹೇಳಿದ್ದರು. ಇನ್ನೂ ಅಪ್ಪು ಸರ್ ಘಟನೆಯನ್ನ ಮರೆಯೋಕೆ ಆಗ್ತಿಲ್ಲ. ರಾಜ್ ಕುಟುಂಬದ ಕುಡಿ ಸೂರಜ್​ಗೆ ಆ್ಯಕ್ಸಿಡೆಂಟ್ ಆಗಿ ಕಾಲು ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು.

ಇನ್ನೂ ಈ ಶಾಕ್​ನಿಂದ ಹೊರಗೆ ಬರುವ ಮುನ್ನವೇ ಸ್ಪಂದನಾ ಧಿಡೀರ್ ಆಗಿ ಸಾವಿಗೀಡಾಗಿದ್ದಾರೆ. ಚಿನ್ನೆಗೌಡ್ರುಗೆ ಹೆಣ್ಣು ಮಕ್ಕಳಿರಲಿಲ್ಲ. ಬಹುಶಃ ಹೆಣ್ಣು ಮಕ್ಕಳಿದ್ದಿದ್ರೂ ಅತ್ತೆ ಮಾವನನ್ನ ಅಷ್ಟು ಚೆನ್ನಾಗಿ ನೋಡ್ಕೊತಿರ್ಲಿಲ್ಲವೋ ಏನೋ. ವಿದ್ಯಾ ಶ್ರೀಮುರುಳಿ ಹಾಗೂ ಸ್ಪಂದನಾ ಅಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ರು

ತುಂಬು ಕುಟುಂಬ, ವಿಜಯ್ ಸರ್, ಮುರುಳಿ ಅಣ್ಣ ಬೇರೆ ಬೇರೆ ಮನೆಯಲ್ಲಿ ವಾಸವಿದ್ರುಲ. ಆದ್ರೂ ವೀಕೆಂಡ್ ಬಂತಂದ್ರೆ ಎಲ್ರೂ ಒಟ್ಟಿಗೆ ಸೇರ್ತಿದ್ರು, ಒಟ್ಟಿಗೆ ಊಟ ಮಾಡ್ತಿದ್ರು. ಮಗ ಶೌರ್ಯನನ್ನ ಸಿನಿಮಾ ಇಂಡಸ್ಟ್ರೀಗೆ ತರ್ಬೇಕು ಅನ್ನೋದು ಸ್ಪಂದನಾ ಅವರ ಬಹು ದೊಡ್ಡ ಕನಸ್ಸಾಗಿತ್ತು.

ವಿಜಯ್ ಸರ್ ನಾನೇ ಲಾಂಚ್ ಮಾಡ್ತೀನಿ ನನ್ನ ಮಗನನ್ನ ಇಂಡಸ್ಟ್ರೀಗೆ ಅಂತ ಹೇಳ್ತಿದ್ರು. ಸ್ಪಂದನಾ ವಿಜಯ್ ಒಬ್ರನ್ನೋಬ್ರು ತುಂಬಾ ಪ್ರೀತಿ ಮಾಡ್ತಿದ್ರು. ಶೌರ್ಯ ತನ್ನ ಅಮ್ಮನನ್ನ ಕಳೆದುಕೊಂಡಿದ್ದಾನೆ. ಆದ್ರೆ ವಿದ್ಯಾ ಶ್ರೀ ಮುರಳಿ, ಅಶ್ವಿನಿ ಪುನೀತ್, ಮಂಗಳಮ್ಮ ಇವ್ರೆಲ್ಲರು ಅವನನ್ನ ಇನ್ಮುಂದೆ ಅಮ್ಮನಂತೆ ರಕ್ಷಿಸುತ್ತಾರೆ" ಎಂದು ಭಾವುಕರಾಗಿ ನುಡಿದಿದ್ದಾರೆ.