ನ್ಯೂಸ್

ಬಿಜೆಪಿ ರಾಜ್ಯಾಧ್ಯಕ್ಷರು ಭ್ರಷ್ಟಾಚಾರಕ್ಕೆ ಕಿಂಗ್: ಸಚಿವ ದಿನೇಶ್​ ಗುಂಡೂರಾವ್ ಆರೋಪ

ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭ್ರಷ್ಟಾಚಾರದ ಕಿಂಗ್. ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡಲು ಶೇ. ೦.೦೦1ರಷ್ಟು ನೈತಿಕತೆ ಇಲ್ಲ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ವಿಜಯೇಂದ್ರ ಟ್ಯಾಕ್ಸ್ ಎಂದು ಬಿಜೆಪಿಯವರೇ ಹೇಳುತ್ತಿದ್ದರು. ಕಮಲ ಪಕ್ಷದವರು ರಾಜ್ಯಪಾಲರ ಮೂಲಕ ಕುಮಾರಸ್ವಾಮಿಯನ್ನು ತೆಗೆಯಲು ತಿರ್ಮಾನ ಮಾಡಿದಂತಿದೆ. ಸಿಎಂ ಸಿದ್ದರಾಮಯ್ಯ ಅವರ‌ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿರುವ ಪ್ರಕರಣ ಕುಮಾರಸ್ವಾಮಿ ಅವರ ತಲೆದಂಡಕ್ಕೆ ಕಾರಣವಾಗಲಿದೆ ಎಂದರು.

ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್ ಗೆ ಕಾಯುತ್ತಿರುವ ಪ್ರಕರಣ ಹೊರಗೆ ಬರುವ ಸನ್ನಿವೇಶ ಬಿಜೆಪಿಯವರೇ ನಿರ್ಮಾಣ ಮಾಡಿದಂತಿದೆ. ಬೆಳೆ ವಿಮೆ ಪರಿಹಾರದ ಹಣ ಜಮಾ ಮಾಡುವಲ್ಲಿ ನಡೆದ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ತನಿಖೆ ಮಾಡಲು ಸಿಐಡಿ ಪಿಎಸೈ ಕಿರಣ್ ನೇತೃತ್ವದ ಎಂಟು ಜನ ಅಧಿಕಾರಿಗಳ ತನಿಖಾ ತಂಡ ಬುಧವಾರ ಪಟ್ಟಣಕ್ಕೆ ಭೇಟಿ ನೀಡಿದ್ದರು. ಅಪರಾಧದಲ್ಲಿ ಕೈಚಳಕ ತೋರಿಸಿದ್ದ ಮಾಡಗಿರಿ ಗ್ರಾಮ ಲೆಕ್ಕಾಧಿಕಾರಿ ಮಲ್ಲಯ್ಯ, ಕಂಪ್ಯೂಟರ್ ಆಪರೇಟರ್ ಆಗಿದ್ದ ಅಕ್ಷಯ್​ ಕುಮಾರ್​ ಎನ್. ಹೊಸೂರು ಎನ್ನುವವರ ಬಂಧಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ ಎಂದು ಹೇಳಿದರು.