ಮೇಷ: ಪಾಲುದಾರಿಕೆಯಲ್ಲಿ ಅನುಕೂಲ. ಅನಾರೋಗ್ಯ ಸಮಸ್ಯೆ. ಮಾತಿನಿಂದ ತೊಂದರೆ. ಸ್ತ್ರೀ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ. ಶುಭಸಂಖ್ಯೆ: 5
ವೃಷಭ: ಸ್ವಯಂಕೃತ ಅಪರಾಧದಿಂದ ಸಮಸ್ಯೆ. ಮೆಡಿಕಲ್ ವಿದ್ಯಾರ್ಥಿಗಳಿಗೆ ವ್ಯವಹಾರದಲ್ಲಿ ಅನುಕೂಲವಿದೆ. ಮಕ್ಕಳಿಂದ ಸಂಕಷ್ಟ. ಶುಭಸಂಖ್ಯೆ: 1
ಮಿಥುನ: ಸ್ನೇಹಿತೆಯಿಂದ ಸಾಲದ ನೆರವು. ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ. ಸ್ನೇಹಿತರೊಂದಿಗೆ ಮೋಜುಮಸ್ತಿಯಲ್ಲಿ ತೊಡಗುವಿರಿ. ಶುಭಸಂಖ್ಯೆ: 7
ಕಟಕ: ಸಾಲ ತೀರಿಸುವ ಚಿಂತೆ. ಹೃದಯ ಸಂಬಂಧಿತ ರೋಗಿಗಳ ಆರೋಗ್ಯ ಬಿಗಡಾಯಿಸಲಿದೆ. ಮಿತ್ರರಿಂದ ಅನುಕೂಲವಿದೆ. ಶುಭಸಂಖ್ಯೆ: 2
ಸಿಂಹ: ನೂತನ ದಂಪತಿಗಳಿಗೆ ಶುಭ ಸುದ್ದಿ ಸಿಗಲಿದೆ. ಉದ್ಯೋಗ ಲಾಭ. ನೆಮ್ಮದಿ ಭಂಗ ಸಾಧ್ಯತೆ. ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ. ಶುಭಸಂಖ್ಯೆ: 2
ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ. ಉದ್ಯೋಗ ಸಮಸ್ಯೆ ಬಗೆಹರಿಯುವುದು. ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ. ಶುಭಸಂಖ್ಯೆ: 6
ತುಲಾ: ಉದ್ಯೋಗ ಬದಲಾವಣೆಯ ಸಾಧ್ಯತೆ. ಸ್ಥಳ ಬದಲಾವಣೆಯಿಂದ ಅನುಕೂಲವಾಗುವುದು. ಮಾತನಾಡುವಾಗ ಎಚ್ಚರವಿರಲಿ. ಶುಭಸಂಖ್ಯೆ: 1
ವೃಶ್ಚಿಕ: ಮನೆ ಕಟ್ಟಲು ತಂದೆಯಿಂದ ಸಹಾಯ. ಭೂ ವ್ಯವಹಾರದಲ್ಲಿ ಲಾಭ. ಆರೋಗ್ಯದಲ್ಲಿ ಏರುಪೇರು. ಆರ್ಥಿಕ ಸ್ಥಿತಿಯಲ್ಲಿ ವ್ಯತ್ಯಾಸ. ಶುಭಸಂಖ್ಯೆ: 8
ಧನಸ್ಸು: ಕಲಾವಿದರಿಗೆ ವಿಶೇಷ ಗೌರವ ಲಭ್ಯವಾಗಲಿದೆ. ಅನುಕೂಲಕರ ದಿವಸ. ಉದ್ಯೋಗದಲ್ಲಿ ಅತಂತ್ರ ಸ್ಥಿತಿ. ಅನಾರೋಗ್ಯ ಸಮಸ್ಯೆ. ಶುಭಸಂಖ್ಯೆ: 2
ಮಕರ: ಪಾಲುದಾರಿಕೆಯಲ್ಲಿ ನಷ್ಟವಾಗುವುದು. ಕೆಟ್ಟ ನಿರ್ಧಾರಗಳಿಂದ ನಿಮಗೇ ಮುಳುವಾಗಲಿದೆ. ಉದ್ಯೋಗ ಒತ್ತಡ. ನಿದ್ರಾಭಂಗ. ಶುಭಸಂಖ್ಯೆ: 4
ಕುಂಭ: ಸಾಲದ ಸಹಾಯ ಲಭಿಸುವುದು. ಗೃಹ ನಿರ್ವಣದ ಆಲೋಚನೆ. ಉದ್ಯೋಗದಲ್ಲಿ ಉತ್ತಮ ಅವಕಾಶ. ಮಿತ್ರರಿಂದ ಸಮಸ್ಯೆ. ಶುಭಸಂಖ್ಯೆ: 7
ಮೀನ: ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು. ಆರೋಗ್ಯದಲ್ಲಿ ವ್ಯತ್ಯಾಸವಾದೀತು. ಫೈನಾನ್ಸ್ ಕ್ಷೇತ್ರದವರಿಗೆ ಅನುಕೂಲ. ಶುಭಸಂಖ್ಯೆ: 2