ನ್ಯೂಸ್

ನಿತ್ಯಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರ-ವ್ಯವಹಾರಗಳಲ್ಲಿ ಲಾಭ

ಮೇಷ: ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಂತೋಷ. ಶತ್ರು ಬಾಧೆ. ಕುಟುಂಬ ಸೌಖ್ಯ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 5

ವೃಷಭ: ಖಾಸಗಿ ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸು. ಅಕಾಲ ಭೋಜನ ಮಾಡಬೇಕಾದೀತು. ಮನಕ್ಲೇಷ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 5

ಮಿಥುನ: ಯತ್ನ ಕಾರ್ಯಗಳಲ್ಲಿ ಜಯ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಹಳೆಯ ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ. ಸಮಾಧಾನ. ಶುಭಸಂಖ್ಯೆ: 9

ಕಟಕ: ಸ್ಥಳ ಬದಲಾವಣೆ. ಸಂಗೀತ ವಿದ್ಯೆಗಳಲ್ಲಿ ಆಸಕ್ತಿ. ಶುಭ ಕಾರ್ಯಕ್ಕೆ ವಿಪರೀತ ಖರ್ಚು. ರಿಯಲ್ ಎಸ್ಟೇಟ್​ನವರಿಗೆ ಲಾಭ. ಶುಭಸಂಖ್ಯೆ:7

ಸಿಂಹ: ವ್ಯಾಪಾರ-ವ್ಯವಹಾರಗಳಲ್ಲಿ ಲಾಭ. ಅವಿವಾಹಿತರಿಗೆ ವಿವಾಹ ಯೋಗ. ಅಲ್ಪ ಆದಾಯ. ದೇವತಾ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ:4

ಕನ್ಯಾ: ವಕೀಲರಿಗೆ ವಾದ- ವಿವಾದಗಳಲ್ಲಿ ಜಯ ದೊರೆಯಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿ. ಮನಃಶಾಂತಿ. ಸಮಾಜದಲ್ಲಿ ಗೌರವ. ಶುಭಸಂಖ್ಯೆ:3

ತುಲಾ: ನೋಂದಣಿ ಕಚೇರಿಯಲ್ಲಿ ಕಾರ್ಯಸಿದ್ದಿ. ಮಿತ್ರರಿಂದ ತೊಂದರೆ. ಮನಸ್ಸಿನಲ್ಲಿ ಭಯ ಭೀತಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಶುಭಸಂಖ್ಯೆ:1

ವೃಶ್ಚಿಕ: ಹತೋಟಿ ಕಳೆದುಕೊಳ್ಳುವಿರಿ. ಸಂಗಾತಿಯೊಂದಿಗೆ ವಿರಸ. ಹಿತಶತ್ರುಗಳಿಂದ ತೊಂದರೆ. ಅರಣ್ಯ ಉತ್ಪನ್ನ ವ್ಯಾಪಾರದಲ್ಲಿ ನಷ್ಟ. ಶುಭಸಂಖ್ಯೆ: 9

ಧನಸ್ಸು: ದುಡುಕಿ ಪಶ್ಚಾತ್ತಾಪ ಪಡುವಿರಿ. ಪೂಜೆಯಲ್ಲಿ ಭಾಗಿ. ಎಷ್ಟೇ ಕಷ್ಟವಾದರೂ ಮುನ್ನುಗ್ಗುವ ಚೈತನ್ಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಶುಭಸಂಖ್ಯೆ: 6

ಮಕರ: ದುರಾಲೋಚನೆ. ದುಷ್ಟ ಚಿಂತೆ. ಹೇಳಿಕೆ ಮಾತನ್ನು ಕೇಳುವ ಸಂಭವ. ಚಂಚಲ ಮನಸ್ಸು. ಸ್ನಾಯುಗಳ ನೋವು ಕಾಡೀತು. ಶುಭಸಂಖ್ಯೆ:3

ಕುಂಭ: ಹಳೆಯ ಗುರುಗಳ ಭೇಟಿ ಮಾಡುವ ಸಾಧ್ಯತೆ. ಚಿನ್ನಬೆಳ್ಳಿ ವ್ಯಾಪಾರಿಗಳಿಗೆ ಧನಲಾಭ. ನಂಬಿಕೆ ದ್ರೋಹ. ಆರ್ಥಿಕ ಬಿಕ್ಕಟ್ಟು. ಶುಭಸಂಖ್ಯೆ: 6

ಮೀನ: ತಾಳ್ಮೆಯಿಂದ ವರ್ತಿಸಿ. ಅಮೂಲ್ಯ ವಸ್ತುಗಳ ಖರೀದಿ. ವಿಪರೀತ ಖರ್ಚು ಆಗಬಹುದು. ಆದಾಯಕ್ಕಿಂತ ವೆಚ್ಚವೇ ಜಾಸ್ತಿ. ಶುಭಸಂಖ್ಯೆ: 4