ಮೇಷ: ಪ್ರೇಮದಲ್ಲಿ ವಿಶ್ವಾಸದ್ರೋಹ. ಮಕ್ಕಳ ನಡತೆಯಿಂದ ಆತಂಕ ಉಂಟಾಗುವುದು. ಗಣ್ಯ ವ್ಯಕ್ತಿಗಳಿಂದ ಸಹಾಯ ದೊರೆಯಲಿದೆ. ಶುಭಸಂಖ್ಯೆ: 5
ವೃಷಭ: ದಿನಸಿ ವ್ಯಾಪಾರದಲ್ಲಿ ಅನುಕೂಲ. ಶತ್ರುಗಳಿಂದ ಮನೋವೇದನೆ. ಸಾಲ ಮಾಡುವ ಸನ್ನಿವೇಶ. ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ: 9
ಮಿಥುನ: ಆಸ್ತಿ ಖರೀದಿ ವಿಷಯದಲ್ಲಿ ಆತಂಕ. ಅಧಿಕ ಖರ್ಚು ಆಗಬಹುದು. ಅತಿಯಾದ ವಿಷಯಾಸಕ್ತಿ. ಸ್ವಂತ ಗ್ರಾಮಕ್ಕೆ ಪ್ರಯಾಣ. ಶುಭಸಂಖ್ಯೆ: 9
ಕಟಕ: ಮಹಿಳೆಯರಿಂದ ಆರ್ಥಿಕ ಸಹಾಯ ಒದಗಿ ಬರಲಿದೆ. ಗುಪ್ತ ವಿಷಯಗಳಿಂದ ಸಮಸ್ಯೆ. ವಾಹನ ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 1
ಸಿಂಹ: ಉದ್ಯೋಗ ಸ್ಥಳದಲ್ಲಿ ಅವಮಾನ. ಬಂಧು ಬಾಂಧವರಿಂದ ಸಹಾಯ. ವಿಲಾಸಿ ಜೀವನಕ್ಕೆ ಬಲಿಯಾದೀರಿ, ಹುಷಾರು. ಶುಭಸಂಖ್ಯೆ:8
ಕನ್ಯಾ: ಸ್ನೇಹಿತರಿಂದ ಆರ್ಥಿಕ ನೆರವು ಸಿಗಲಿದೆ. ದೂರ ಪ್ರದೇಶದಲ್ಲಿ ಉದ್ಯೋಗ ಲಾಭ. ಸ್ವಂತ ಉದ್ಯಮದವರಿಗೆ ಸಾಲದ ಸಮಸ್ಯೆ. ಶುಭಸಂಖ್ಯೆ: 3
ತುಲಾ: ಅನಿರೀಕ್ಷಿತವಾಗಿ ಹಳೆಯ ಮಿತ್ರರ ಭೇಟಿ. ಭಾವನೆ ಆಸೆ-ಆಕಾಂಕ್ಷೆಗಳಲ್ಲಿ ವಿಹರಿಸುವಿರಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಮುನ್ನಡೆ. ಶುಭಸಂಖ್ಯೆ: 4
ವೃಶ್ಚಿಕ: ಸಂಗಾತಿಯಿಂದ ಸೂಕ್ತ ಮಾರ್ಗದರ್ಶನ ಸಿಗಲಿದೆ. ಆಕಸ್ಮಿಕ ಅವಘಡ. ಬೆಳೆ ನಷ್ಟ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ಸಂಶಯ.ಶುಭಸಂಖ್ಯೆ:1
ಧನಸ್ಸು: ಅನಾರೋಗ್ಯದಿಂದ ಆಸ್ಪತ್ರೆಗೆ ಹೋಗಬೇಕಾದೀತು.ಶತ್ರುಕಾಟ ತಪ್ಪಿದ ಸಮಾಧಾನ. ಭವಿಷ್ಯದ ಚಿಂತೆ. ಬಂಧುಗಳಿಂದ ಲಾಭ. ಶುಭಸಂಖ್ಯೆ:9
ಮಕರ: ಪ್ರೀತಿಯ ಬಲೆಯಲ್ಲಿ ಸಿಲುಕುವಿರಿ. ಉದ್ಯೋಗದಲ್ಲಿ ಅನುಕೂಲವಿದೆ. ಅಧಿಕ ಖರ್ಚು ಆಗುವುದು. ವಿಚ್ಛೇದಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 5
ಕುಂಭ: ಪ್ರಭಾವಿ ವ್ಯಕ್ತಿಗಳಿಂದ ನಿಮ್ಮ ಜೀವನದಲ್ಲಿ ತಿರುವು. ಪ್ರಯಾಣದಲ್ಲಿ ಹಣ ಕಳ್ಳತನ. ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸ ಯೋಗ. ಶುಭಸಂಖ್ಯೆ:2
ಮೀನ: ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ರಾಜಕೀಯ ದಲ್ಲಿರುವವರಿಗೆ ಪದವಿ ಪ್ರಾಪ್ತಿ. ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಮೋಸ. ಶುಭಸಂಖ್ಯೆ:6