ನ್ಯೂಸ್

ಲಾಕ್​ಡೌನ್​ನಿಂದ ತರಗತಿ ಪಾಠ ತಪ್ಪಿದರೆ ಚಿಂತಿಸಬೇಕಿಲ್ಲ ನ್ಯಾಷನಲ್​ ಡಿಜಿಟಲ್​ ಲೈಬ್ರರಿಯಲ್ಲಿದೆ ಇ-ಪಠ್ಯ

kumarvrl

ಕೋವಿಡ್​-19 ವಿರುದ್ಧ ಹೋರಾಟಕ್ಕಾಗಿ ಇಡೀ ದೇಶ ಲಾಕ್​ಡೌನ್​ನಲ್ಲಿದೆ. ಜನರು ಮನೆಯಲ್ಲಿಯೇ ಇದ್ದು ಇದರ ವಿರುದ್ಧ ಹೋರಾಟ ನಡೆಸಿದ್ದಾರೆ. ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತರಗತಿಯ ಪಾಠ ಕೇಳುವುದರಿಂದ ವಂಚಿತರಾಗಿದ್ದಾರೆ. ಜತೆಗೆ, ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡೋಣವೆಂದರೆ, ಪುಸ್ತಕಗಳಿಗಾಗಿ ಗ್ರಂಥಾಲಯಕ್ಕೂ ತೆರಳುವಂತಿಲ್ಲ.

ವಿದ್ಯಾರ್ಥಿಗಳ ಈ ಸಂಕಷ್ಟವನ್ನು ದೂರ ಮಾಡಲೆಂದೇ ರಾಷ್ಟ್ರೀಯ ಡಿಜಿಟಲ್​ ಗ್ರಂಥಾಲಯ ವಿಶೇಷ ಪಠ್ಯ ಹಾಗೂ ಸಾಮಗ್ರಿಗಳನ್ನು ಅಣಿಗೊಳಿಸಿದೆ.

ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಅಧ್ಯಯನ ಸಾಮಗ್ರಿಗಳನ್ನು ನಿರಂತರವಾಗಿ ಅಪ್​ಡೇಟ್​ ಮಾಡುತ್ತಲೇ ಇದ್ದೇವೆ. ಈ ಬಗ್ಗೆ ರಾಷ್ಟ್ರೀಯ ಡಿಜಿಟಲ್​ ಗ್ರಂಥಾಲಯದ ಸೋಷಿಯಲ್​ ಮೀಡಿಯಾ ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಗ್ರಂಥಾಲಯ ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟಕ್ಕೂ ಈ ಡಿಜಿಟಲ್​ ಲೈಬ್ರರಿಯಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗ ಆಗುವಂತಾದ್ದು ಏನೇನಿದೆ ಗೊತ್ತಾ?

ಪಠ್ಯಪುಸ್ತಕಗಳು, ಪ್ರಶ್ನೆಪತ್ರಿಕೆಗಳು, ವಿಡಿಯೋ ಉಪನ್ಯಾಸಗಳು, ಪ್ರಶ್ನೋತ್ತರ ಮಾಲಿಕೆ, ಸಿಬಿಎಸ್​ಇ, ಕರ್ನಾಟಕ ಶಿಕ್ಷಣ ಮಂಡಳಿ ಸೇರಿ ವಿವಿಧ ಮಂಡಳಿಗಳ ಪಠ್ಯಕ್ರಮಗಳನ್ನು ನೀಡಲಾಗಿದೆ. ಇದಲ್ಲದೇ, ನೀಟ್​, ಜೆಇಇ ಮೇನ್ಸ್​ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಸಾಮಗ್ರಿಗಳನ್ನು ನೀಡಲಾಗಿದೆ.

ನ್ಯಾಷನಲ್​ ಡಿಜಿಟಲ್​ ಲೈಬ್ರರಿಗೆ ಲಿಂಕ್​ಗಳು ಇಲ್ಲಿವೆ. www.ndl.gov.in ಅಥವಾ ndl.iitkgp.ac.in.