ಬೆಂಗಳೂರು: ನಗರದ ಇಂಜಿನಿಯರೊಬ್ಬರು ಡಿಜಿಟಲ್ ಅರೆಸ್ಟ್(Digital arrest) ಆಗಿ ಬರೊಬ್ಬರಿ 11.8 ಕೋಟಿ ರೂ. ಕಳೆಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ವಂಚಕರು ಪೊಲೀಸ್ ಅಧಿಕಾರಿಗಳಂತೆ ವರ್ತಿಸಿ ಕರೆ ಮಾಡಿ, ಆಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಿರಿ ಎಂದು ಸುಳ್ಳು ಆರೋಪ ಮಾಡಿ, ಬೆದರಿಕೆ ಹಾಕಿ ವಂಚನೆ ಮಾಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ, ನ.11ರಂದು ಇಂಜಿನಿಯರ್ಗೆ ವಂಚಕರು ಕರೆ ಮಾಡಿದ್ದು, ಭಾರತೀಯ ಟೆಲಿಕಾಂ ಅಧಾರಿಟಿ ಆಫ್ ಇಂಡಿಯಾ(ಟ್ರಾಯ್) ಅಧಿಕಾರಿ ಎಂದು ಪೋನ್ ಮಾಡಿದ್ದಾರೆ. ನಿಮ್ಮ ಆಧಾರಕಾರ್ಡ್ ಲಿಂಕ್ ಮಾಡಿರುವ ಸಿಮ್ಕಾರ್ಡ್ನಿಂದ ಆಕ್ರಮ ಜಾಹಿರಾತು ಮತ್ತು ಕಿರಿಕುಳ ಸಂದೇಶಗಳಿಗೆ ಬಳಸಲಾಗಿದೆ ಎಂದು ಇಂಜಿನಿಯರ್ಗೆ ಆರೋಪಿಸಿದ್ದಾರೆ. ಬಳಿಕ ಮತ್ತೊಬ್ಬ ಪೊಲೀಸ್ ಅಧಿಕಾರಿಯಂತೆ ಸ್ಕೈಪ್ ಕಾಲ್ ಮಾಡಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ನಿಮ್ಮ ಮೇಲೆ ಮನಿ ಲಾಂಡರಿಂಗ್ ಕೇಸ್ ಹಾಕಲಾಗುವುದು ಎಂದು ಬೆದರಿಸಿ ಈ ವಿಚಾರ ಯಾರಿಗೂ ಹೇಳದಂತೆ ಡಿಜಿಟಲ್ ಅರೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ಸಿರಿಯಾ ಮಾಜಿ ಅಧ್ಯಕ್ಷ Bashar Al-Assad ವಿಚ್ಛೇದನದ ಸುದ್ದಿ; ಟರ್ಕಿಶ್ ವರದಿ ತಿರಸ್ಕರಿಸಿದ ರಷ್ಯಾ ಹೇಳಿದಿಷ್ಟು..
ಇದೇ ತರ ಪ್ರತಿನಿತ್ಯದ ಕಿರುಕುಳದಿಂದ ಬೆಸತ್ತ ಇಂಜಿನಿಯರ್, ಕೊನೆಯದಾಗಿ ವಂಚಕರ ಬೆದರಿಕೆಗಳಿಗೆ ಹೆದರಿ ವಿವಿಧ ರೀತಿಯಲ್ಲಿ ಒಟ್ಟು 11.8 ಕೋಟಿ ರೂ. ವಂಚಕರ ಖಾತೆಗೆ ಹಣ ವರ್ಗಾಹಿಸಿದ್ದಾನೆ. ಬಳಿಕ ತಾನು ವಂಚನೆಗೆ ಒಳಾಗಿದ್ದೇನೆ ಎಂದು ಅರಿತ ಇಂಜಿನಿಯರ್ ಕೊನೆಗೆ ಠಾಣೆಗೆ ದೂರು ನೀಡಿದ್ದಾನೆ,(ಏಜೆನ್ಸೀಸ್).