ನ್ಯೂಸ್

ಜಿಮ್​ನಲ್ಲಿ ವರ್ಕೌಟ್ ಮುಗಿಸಿ ನೀರು ಕುಡಿಯುತ್ತಿದ್ದ ಯುವಕ​ ಕುಸಿದು ಬಿದ್ದು ಸಾವು!: CCTVಯಲ್ಲಿ ದೃಶ್ಯ ಸೆರೆ

CCTV : ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ಯುವಕನೊರ್ವ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಮಿಲಿಂದ್​​ ಕುಲಕರ್ಣಿ(37) ಮೃತ ಯುವಕ ಎಂದು ಗುರುತಿಸಲಾಗಿದೆ. ಈ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಜಿಮ್‌ನಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಾಯಾಮದ ನಂತರ ಮಿಲಿಂದ್​​ ಕುಲಕರ್ಣಿ ನೀರು ಕುಡಿಯುತ್ತಿರುವುದು ಕಂಡುಬಂದಿದೆ. ನೀರು ಕುಡಿದ ತಕ್ಷಣ ಹಿಂದಕ್ಕೆ ತಿರುಗಿದ್ದಾರೆ. ತಿರುಗಿ ನಂತರ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿರುವ ಘಟನೆ ಸಿಸಿಟಿವಿಯಲ್ಲಿ ವೈರಲ್​ ಆಗಿದೆ.

ಕುಲಕರ್ಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಕುಲಕರ್ಣಿ ಕಳೆದ ಆರು ತಿಂಗಳಿನಿಂದ ಜಿಮ್‌ಗೆ ಹೋಗುತ್ತಿದ್ದರು ಎನ್ನಲಾಗಿದೆ.

ಆದಾಗ್ಯೂ, ಕಳೆದ ಕೆಲವು ವರ್ಷಗಳಿಂದ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೃದಯಾಘಾತದ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಹಲವಾರು ಜಾಗತಿಕ ವೈದ್ಯಕೀಯ ವರದಿಗಳು 30 ಮತ್ತು 40ರ ಹರೆಯದ ಜನರಲ್ಲಿ ಹೃದಯಾಘಾತದ ಸಂಖ್ಯೆಯಲ್ಲಿ ಏರಿಕೆಯಾಗಿರುವುದನ್ನು ಎತ್ತಿ ತೋರಿಸುತ್ತವೆ.(ಏಜೆನ್ಸೀಸ್​)