ನ್ಯೂಸ್

ಅಧಿಕಾರಿಗಳು ಕೊಟ್ಟ ಸಲಹೆ ಪಾಲಿಸದೆ ಎಡವಟ್ಟಾಯ್ತಾ?

ಬೆಂಗಳೂರು : ಕಾಲ್ತುಳಿತದ ದುರಂತಕ್ಕೆ ತರಹೇವಾರಿ ಕಾರಣಗಳು ಕೇಳಿಬರುತ್ತಿವೆ. ಭದ್ರತೆ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಕೊಟ್ಟ ಸಲಹೆಗಳನ್ನು ಸರ್ಕಾರ ಸಾರಸಗಟಾಗಿ ನಿರ್ಲಕ್ಷ್ಯಿಸಿದ್ದರಿಂದಲೇ ಈ ದುರಂತ ನಡೆಯಿತು ಎಂದು ಹೇಳಲಾಗುತ್ತಿದೆ.

ಮಂಗಳವಾರ ರಾತ್ರಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಎಲ್ಲೆ ಮೀರಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿಯಿಡೀ ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ನಗರ, ಪಟ್ಟಣಗಳಲ್ಲಿ ಬೆಳಗಿನ ಜಾವದವರೆಗೂ ಸಂಭ್ರಮಾಚರಣೆ ನಡೆದಿತ್ತು. ವಿಶೇಷವಾಗಿ ಬೆಂಗಳೂರಿನಲ್ಲಿ ಪಟಾಕಿ ಸಿಡಿಸಿ ಕಾರು, ಬೈಕ್‌ಗಳಲ್ಲಿ ನಗರ ಸುತ್ತಾಡಿದ್ದರು. ಇದಕ್ಕೂ ಮೊದಲು ಪೊಲೀಸ್ ಇಲಾಖೆ, ೈನಲ್ ಪಂದ್ಯ ಇರುವ ಕಾರಣಕ್ಕೆ ರಾತ್ರಿ ಗಸ್ತು ಅಧಿಕಾರಿ, ಸಿಬ್ಬಂದಿ ಜತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿತ್ತು. ಜತೆಗೆ ಸಂಭ್ರಮದಲ್ಲಿ ತೊಡಗಿರುವ ಅಭಿಮಾನಿಗಳ ಮನವೊಲಿಸಿ ಕಳುಹಿಸಬೇಕೇ ಹೊರತು ಯಾರ ಮೇಲೂ ಕೈ ಮಾಡಬಾರದು ಎಂಬ ಹಿರಿಯ ಪೊಲೀಸ್ ಅಧಿಕಾರಿಗಳ ಕಟ್ಟಾಜ್ಞೆಯಿಂದ ಪೊಲೀಸರು ಬೆಳಗಿನ ಜಾವದವರೆಗೂ ಎಲ್ಲಿಯೂ ಅನಾಹುತ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

ಬೆಳಗ್ಗೆ ಏಕಾಏಕಿ ಆರ್‌ಸಿಬಿ ತಂಡಕ್ಕೆ ಸರ್ಕಾರದಿಂದ ಸನ್ಮಾನ ಕಾರ್ಯಕ್ರಮ ಎಂದಾಗ ಅದರಲ್ಲಿಯೂ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಮತ್ತು ತೆರೆದ ಬಸ್‌ನಲ್ಲಿ ರ‌್ಯಾಲಿ ಎಂದಾಗ ಪೊಲೀಸ್ ಇಲಾಖೆಗೆ ಸೆಕ್ಯೂರಿಟಿ ಒದಗಿಸಲು ಕೊಂಚ ಸವಾಲಿನ ಕೆಲಸವೇ ಆಗಿತ್ತು. ಆದ್ದರಿಂದ ಒಂದೇ ಕಾರ್ಯಕ್ರಮ ಸಾಕು. ಎರಡು ಕಡೆ ಬೇಡ ಎಂದು ಸರ್ಕಾರದ ಮನವೊಲಿಸಲು ಪೊಲೀಸ್ ಇಲಾಖೆ ಪ್ರಯತ್ನ ಮಾಡಿದಾಗ ಪ್ರಭಾವಿ ಸಚಿವರು ಒಪ್ಪದೆ ನಿಮ್ಮ ಅಭಿಪ್ರಾಯ ಬೇಡ ನಾವು ಹೇಳಿದಷ್ಟು ಮಾಡಿ ಎಂದು ಸೂಚನೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೂ, ತೆರೆದ ವಾಹನದಲ್ಲಿ ರ‌್ಯಾಲಿ ಬೇಡ ಎಂದು ನಿರ್ಧಾರ ಬದಲಿಸಲಾಯಿತು.

ಮಂಗಳವಾರ ರಾತ್ರಿ ನಡೆದ ಸಂಭ್ರಮಾಚಾರಣೆ ಗೊತ್ತಿದ್ದ ಪೊಲೀಸ್ ಇಲಾಖೆ ವಿಧಾನಸೌಧ ಮೆಟ್ಟಿಲ ಮೇಲೆ ಸನ್ಮಾನಕ್ಕೆ ಬೇಕಾದ ಬಿಗಿ ಭದ್ರತೆ ವ್ಯವಸ್ಥೆ ಮಾಡಿಕೊಂಡಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಒಳಗಿನ ಕಾರ್ಯಕ್ರಮದ ಜವಾಬ್ದಾರಿಯನ್ನು ಅವರಿಗೇ ವಹಿಸಲಾಗಿತ್ತು. ಆದರಿಂದ ಸಾಮಾನ್ಯವಾಗಿ ಪಂದ್ಯಾವಳಿ ನಡೆಯುವ ಸಮಯದಲ್ಲಿ ನೀಡುತ್ತಿದ್ದ ಸೆಕ್ಯೂರಿಟಿಯಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಕೊನೆಗೆ ಎರಡೂ ಕಡೆಗಳಲ್ಲಿ 2 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸ್ ನಿಯಂತ್ರಣಕ್ಕೆ ಬಂದಿಲ್ಲ ಎನ್ನಲಾಗುತ್ತಿದೆ.

ಆಪತ್ತು ತಂದ ಉಚಿತ ಟಿಕೆಟ್

ಆರ್‌ಸಿಬಿ ಪಂದ್ಯಾವಳಿಗೆ ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಬರುವ ಹುಚ್ಚು ಅಭಿಮಾನಿಗಳಿಗೆ ಉಚಿತ ಟಿಕೆಟ್ ಕೊಟ್ಟಿರುವುದು ಅನಾಹುತಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿ ಪಂದ್ಯಕ್ಕೆ ಬಿಗಿ ಭದ್ರತೆ ಒದಗಿಸುವ ಮತ್ತು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಸುನೀಗಿದಾಗ ಸಣ್ಣ ಅನಾಹುತವೂ ಆಗದಂತೆ ಎಚ್ಚರಿಕೆವಹಿಸಿದ್ದ ಖಾಕಿ ಪಡೆ ಮೈಮರೆತರ ಎಂಬ ಆರೋಪ ಕೇಳಿ ಬರುತ್ತಿದೆ. ಉಚಿತ ಟಿಕೆಟ್ ವಿತರಿಸುವ ಬಗ್ಗೆ ಯಾಕೇ ನಿಯಂತ್ರಣ ಏರಲಿಲ್ಲ. ಕೂಗಳತೆ ದೂರಲ್ಲಿಯೇ ಎರಡು ಕಾರ್ಯಕ್ರಮ ಏರ್ಪಡಿಸದಂತೆ ಸರ್ಕಾರದ ಮನವೊಲಿಸುವಲ್ಲಿ ವಿಲವಾದರ ಎಂಬುದು ಎಲ್ಲ ಪ್ರಶ್ನೆಯಾಗಿದೆ.

ಹುಚ್ಚು ಅಭಿಮಾನಿಗಳ ದಡ್ಡತನ

ಆರ್‌ಸಿಬಿ ಆಟಗಾರರ ಸಂಭ್ರಮಾಚರಗೆ ಅಭಿಮಾನಿಗಳು ತಮ್ಮ ಸಣ್ಣ ಸಣ್ಣ ಮಕ್ಕಳನ್ನು ಕರೆ ತಂದಿರುವುದು ಅನಾಹುತಕ್ಕೆ ಅವರೇ ಆಹ್ವಾನ ನೀಡಿದರು. ಹೆಣ್ಣು ಮಕ್ಕಳು, ವಯಸ್ಸಾದವರು ಮತ್ತು ಅಂಗವಿಕಲರು ಸಹ ಜನ ಸಮೂಹದಲ್ಲಿ ಸಿಲುಕಿಕೊಂಡ ದೃಶ್ಯ ಕಂಡುಬಂತು. ಎಲ್ಲಿಯೋ ಒಂದು ಕಡೆ ಜನರು ಅತೀರೇಕ ಮಾಡಿಕೊಂಡ ಪರಿಣಾಮ ಅನಾಹುತಕ್ಕೆ ಅವರೂ ಕಾರಣರಾಗಿದ್ದಾರೆ.

ಸಲಹೆ ಪರಿಗಣಿಸದೆ ಪ್ರಮಾದ

*ರಾತ್ರಿ ಸಂಭ್ರಮಾಚಾರಣೆಗೆ ಭದ್ರತೆ ಒಗಿಸಿ ಸುಸ್ತಾಗಿದ್ದ ಖಾಕಿ ಪಡೆ ಮೇಲೆ ಒತ್ತಡ

*ಹೊರಾಂಗಣದಲ್ಲಿ ಕಾರ್ಯಕ್ರಮ ಬೇಡವೆಂದರೂ ಆಯೋಜಿಸಿದ ಸರ್ಕಾರ

*ಗುಪ್ತಚರ ಮಾಹಿತಿ ಇದ್ದರೂ ಕೆಲವೇ ಗಂಟೆಗಳಲ್ಲಿ ಎರಡು ಕಡೆ ಕಾರ್ಯಕ್ರಮ

*ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಬಿಡಲು ಏಕಾಏಕಿ ಗೇಟ್ ಓಪನ್ ಮಾಡಿದ್ದು

*ಕ್ರೀಡಾಂಗಣದ ಸುತ್ತ ಸಾಮಾನ್ಯ ಪಂದ್ಯಕ್ಕೆ ನೀಡಿದಷ್ಟು ಭದ್ರತೆ ಕೊಟ್ಟ ಪೊಲೀಸ್

ಕೆಎಸ್‌ಸಿಎ ವಿರುದ್ಧ ದೂರು ದಾಖಲು?

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಪ್ರಕರಣದ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯದ ಆರೋಪದಡಿ ನಗರ ಪೊಲೀಸರು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಕೆಎಸ್‌ಸಿಎ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ.