ಮುಂಬೈ: ಭಾರತೀಯ ಸಂಗೀತದ ತಬಲಾ ವಾದಕ ಜಾಕಿರ್ ಹುಸೇನ್(Zakir Hussain) ಭಾನುವಾರ(ಡಿಸೆಂಬರ್ 15) ತಡರಾತ್ರಿ ನಿಧನರಾಗಿದ್ದಾರೆ. ಈ ವಿಷಯವನ್ನು ಅವರ ಕುಟುಂಬದವರು ಅಧಿಕೃತವಾಗಿ ಖಚಿತಪಡಿಸಿದೆ. ಜಾಕಿರ್ ಅವರು ದೀರ್ಘಕಾಲದವರೆಗೆ ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂಬ ಗಂಭೀರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಾರಣದಿಂದಾಗಿ ಅವರ ಆರೋಗ್ಯವು ಇತ್ತೀಚೆಗೆ ಹದಗೆಟ್ಟಿತು ಮತ್ತು ಅವರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಮ್ಮ 73ನೇ ವಯಸ್ಸಿನಲ್ಲಿ ಜಾಕಿರ್ ಇಹಲೋಕ ತ್ಯಜಿಸಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಲೈವ್ ಕನ್ಸರ್ಟ್ ಮಾಡುವುದಿಲ್ಲ; ದಿಲ್ಜಿತ್ ದೋಸಾಂಜ್ ಹೀಗೆನ್ನಲು ಇದೇ ಕಾರಣ.. | Diljit Dosanjh
ಜಾಕಿರ್ ಹುಸೇನ್ ಅವರು ಒಮ್ಮೆ ‘ಸೆಕ್ಸಿಯೆಸ್ಟ್ ಮ್ಯಾನ್’ ಸ್ಪರ್ಧೆಯಲ್ಲಿ ಬಾಲಿವುಡ್ ಬಿಗ್ಬಿ ಅಮಿತಾಭ್ ಬಚ್ಚನ್ ಅವರನ್ನು ಸೋಲಿಸಿರುವ ಬಗ್ಗೆ ನಿಮಗೆ ತಿಳಿದಿದೆಯೇ. ಸುಂದರ ನೋಟ, ಗುಂಗುರು ಕೂದಲು ಮತ್ತು ಕುರ್ತಾ ಪೈಜಾಮಾದ ಸಾಂಪ್ರದಾಯಿಕ ಡ್ರೆಸ್‌ಕೋಡ್ ಜಾಕಿರ್ ಹುಸೇನ್ ಅವರ ಗುರುತಾಗಿತ್ತು. 1994ರಲ್ಲಿ ಭಾರತೀಯ ನಿಯತಕಾಲಿಕೆ ಜಂಟಲ್‌ಮ್ಯಾನ್‌ನಿಂದ ಜಾಕಿರ್ ಅವರನ್ನು ಅತ್ಯಂತ ‘ಸೆಕ್ಸಿಯೆಸ್ಟ್ ಮ್ಯಾನ್’ ಎಂದು ಆಯ್ಕೆ ಮಾಡಲಾಯಿತು ಎಂದು ಪಿಟಿಐ ವರದಿ ಮಾಡಿದೆ. ಈ ವಿಚಾರದಲ್ಲಿ ಅವರು ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ಹಿಂದಿಕ್ಕಿದ್ದರು.
ಈ ಕುರಿತು ಜಾಕಿರ್ ಅವರು, ಮ್ಯಾಗಜಿನ್‌ನ ಜನರು ನನ್ನನ್ನು ಭೇಟಿಯಾಗಲು ಬಂದಿದ್ದರು. ವೆಸ್ಟರ್ನ್ ಡ್ರೆಸ್ ಕೋಡ್ (ಕೋಟ್ ಪ್ಯಾಂಟ್) ಧರಿಸಿ ಮ್ಯಾಗಜಿನ್‌ಗಾಗಿ ಫೋಟೋಶೂಟ್ ಕೇಳಿದ್ದರು ಎಂದು ಹೇಳಿದ್ದಾರೆ. ನಾನು ಅಮಿತಾಭ್ ಬಚ್ಚನ್‌ಗಿಂತ ಹೆಚ್ಚು ಮತಗಳನ್ನು ಗಳಿಸಿದ್ದು ಹೇಗೆ ಎಂದು ಅವರಿಗೂ ನಂಬಲಾಗಲಿಲ್ಲ. ಈ ಮೂಲಕ ಜಾಕಿರ್ ಹುಸೇನ್ 30 ವರ್ಷಗಳ ಹಿಂದೆ ವಿಶೇಷ ಸಾಧನೆ ಮಾಡಿದ್ದರು.
ಸಹಜವಾಗಿ ಜಾಕಿರ್ ಹುಸೇನ್ ಇಂದು ನಮ್ಮ ನಡುವೆ ಇಲ್ಲ. ಆದರೆ ಶಾಸ್ತ್ರೀಯ ಸಂಗೀತ ಪ್ರಪಂಚಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸಂಗೀತ ಲೋಕದಲ್ಲಿ ಜಾಕಿರ್ ಹುಸೇನ್ ಅವರ ಹೆಸರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿತ್ತು. ಅವರು 1973 ರಿಂದ 2007 ರವರೆಗೆ ಸಂಗೀತಗಾರರಾಗಿ ತಮ್ಮ ಸಕ್ರಿಯ ವೃತ್ತಿಜೀವನದಲ್ಲಿ ಅನೇಕ ಜನಪ್ರಿಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅಂತಾರಾಷ್ಟ್ರೀಯ ಪ್ರಶಸ್ತಿಗಳ ವಿಷಯದಲ್ಲಿ ಜಾಕಿರ್ ಹುಸೇನ್ ವಿವಿಧ ವರ್ಷಗಳಲ್ಲಿ ಸುಮಾರು 3 ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದರು. ಕೇವಲ 12ನೇ ವಯಸ್ಸಿನಲ್ಲಿ ಜಾಕಿರ್ ಸಂಗೀತ ಜಗತ್ತಿಗೆ ಪ್ರವೇಶಿಸಿದರು. ಅಲ್ಲಿ ಸಂಗೀತಗಾರನಾಗಿ ಅವರ ಇನ್ನಿಂಗ್ಸ್ ದೀರ್ಘಕಾಲದವರೆಗೆ ಮುಂದುವರೆಯಿತು.(ಏಜೆನ್ಸೀಸ್)