ನ್ಯೂಸ್

ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದೇ ಮುಳುವಾಗುತ್ತಾ ಜಮೀರ್‌ಗೆ? ಕ್ವಾರಂಟೈನ್‌ಗೆ ಒಳಗಾಗ್ತಾರಾ ಚಾಮರಾಜಪೇಟೆ ಶಾಸಕ?

ಬಳ್ಳಾರಿ/ಬೆಂಗಳೂರು: ಕರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವಸಂಸ್ಕಾರದಲ್ಲಿ ಭಾಗಿಯಾಗಿದ್ದ ಶಾಸಕ ಜಮೀರ್ ಅಹ್ಮದ್ ಅವರಿಗೆ ಕೂಡ ಕ್ವಾರಂಟೈನ್ ಅಗತ್ಯ ಎಂಬ ಮಾತುಗಳು ಕೇಳಿಬರತೊಡಗಿವೆ.

ಸ್ವತಃ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರೇ ಇಂಥದೊಂದು ಅಭಿಪ್ರಾಯ ಹೊರಹಾಕಿದ್ದು, ಇತರ ಕೆಲವು ನಾಯಕರೂ ಇದೇ ಧ್ವನಿಯಲ್ಲಿ ಹೇಳಿಕೆ ನೀಡಿದ್ದಾರೆ.

‘‘ಜಮೀರ್ ಅವರು ಶೀಘ್ರ ಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ನಿಯಮಗಳ ಪ್ರಕಾರ ಎಲ್ಲ ಪರೀಕ್ಷೆಗಳಿಗೆ ಒಳಪಡಲಿದ್ದಾರೆ’’ ಎಂದು ಶ್ರೀರಾಮುಲು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಇನ್ನೊಂದೆಡೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ‘‘ಜಮೀರ್ ಅವರನ್ನು ಕ್ವಾರಂಟೈನ್ ಮಾಡುವ ಕುರಿತು ತನಿಖಾ ವರದಿ ಬಂದ ನಂತರ ನಿರ್ಧರಿಸಲಾಗುವುದು’’ ಎಂದು ಹೇಳಿದರು.