ನ್ಯೂಸ್

ಶಿಲ್ಪಾ ಶೆಟ್ಟಿ ಹಣಕ್ಕಾಗಿ ರಾಜ್ ಕುಂದ್ರಾನಾ ಮದ್ವೆಯಾದ್ರಾ? ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ನಟಿ

ಮುಂಬೈ:ಬಾಲಿವುಡ್ ನಾಯಕಿ ಶಿಲ್ಪಾ ಶೆಟ್ಟಿ ಸಿನಿಮಾ ಜತೆಗೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟಿವ್​ ಆಗಿರುವ ನಟಿ. ಇತ್ತೀಚೆಗೆ ಕಾರಣಾಂತರಗಳಿಂದ ಶಿಲ್ಪಾ ಶೆಟ್ಟಿ ಸದಾ ಸುದ್ದಿಯಲ್ಲಿರುತ್ತಾರೆ. ಪರ್ಸನಲ್ ಲೈಫ್, ಫಿಟ್ನೆಸ್, ಸಿನಿಮಾ ಹೀಗೆ ಹಲವು ವಿಷಯಗಳಿಂದ ಶಿಲ್ಪಾ ಹೆಸರು ಸುದ್ದಿಯಲ್ಲಿ ಕೇಳಿ ಬರುತ್ತಿದೆ.

ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲ್ಪಟ್ಟ ನಂತರ, ಶಿಲ್ಪಾ ಬಗ್ಗೆ ಅನೇಕ ಚರ್ಚೆಗಳು ಪ್ರಾರಂಭವಾದವು. ಹಣಕ್ಕಾಗಿ ರಾಜ್ ಕುಂದ್ರಾ ಅವರನ್ನು ಮದುವೆಯಾದರು ಎಂದು ಹಲವರು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಈ ನಾಯಕಿ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಮದುವೆಯ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ.

ರಾಜ್ ಕುಂದ್ರಾ 108ನೇ ಶ್ರೀಮಂತ ಬ್ರಿಟಿಷ್ ಭಾರತೀಯ. ಸಿನಿಮಾದಲ್ಲಿ ನಟಿಸುವಾಗ ನಾನೂ ಕೂಡ ಶ್ರೀಮಂತಳಾಗಿದ್ದೆ. ಈಗ ಶ್ರೀಮಂತೆ ಕೂಡ.. ಕೇವಲ ಹಣಕ್ಕಾಗಿ ರಾಜ್ ಕುಂದ್ರಾ ಅವರನ್ನು ಮದುವೆಯಾಗಿಲ್ಲ ಎಂದಿದ್ದಾಳೆ.

'ಯಶಸ್ವಿ ಮಹಿಳೆ ತನ್ನ ನಿಯಮಗಳ ಪ್ರಕಾರ ಜೀವನವನ್ನು ನಡೆಸಲು ಸಹಾಯ ಮಾಡುವ ಪುರುಷನನ್ನು ಮದುವೆಯಾಗುತ್ತಾಳೆ. ಅದಕ್ಕೇ ರಾಜ್ ನನ್ನು ಮದುವೆಯಾದೆ. ಸಂಗಾತಿಯಲ್ಲಿ ನನಗೆ ಬೇಕಾದ ಎಲ್ಲಾ ಗುಣಗಳು ರಾಜ್ ಅವರಲ್ಲಿದೆ. ರಾಜ್ ಜತೆ ಮದುವೆಗೂ ಮುನ್ನ ಶ್ರೀಮಂತರು ನನಗಾಗಿ ಸಾಲುಗಟ್ಟಿ ನಿಂತಿದ್ದರು. ಆದರೆ ಜೀವನದಲ್ಲಿ ಎಂದಿಗೂ ಹಣಕಾಸಿಗೆ ಆದ್ಯತೆ ನೀಡಲಿಲ್ಲ. ಜೀವನದಲ್ಲಿ ಎಲ್ಲವೂ ಹಣಕ್ಕೆ ಸಂಬಂಧಿಸಿದ್ದಲ್ಲ.' ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.