ನವದೆಹಲಿ: ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ಪ್ರಪಂಚದಾದ್ಯಂತ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಿಟೌನ್ ಕಿಂಗ್ಖಾನ್ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದರು. ವಧು-ವರರ ಜತೆ ಫ್ಲರ್ಟ್ ಮಾಡುವುದರೊಂದಿಗೆ ವೇದಿಕೆಯ ಮೇಲೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಸದ್ಯ ಮದುವೆಯಲ್ಲಿ ಶಾರೂಖ್ ಶೋ ನೀಡಲು ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ಬಿಸಿಬಿಸಿ ಚರ್ಚೆ ಹುಟ್ಟಿಕೊಂಡಿದೆ.
ವಿಡಿಯೋವನ್ನು ವಧುವಿನ ಮೇಕಪ್ ಕಲಾವಿದೆ ಅಮೃತಾ ಕೌರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡುವಾಗ ಅಮೃತಾ ಅವರು ಶಾರೂಖ್ ಖಾನ್ ನೀವು ವಧುವನ್ನು ಹೊಗಳಿದ ರೀತಿ ನನ್ನ ಕಠಿಣ ಪರಿಶ್ರಮಕ್ಕೆ ಫಲ ನೀಡಿದೆ ಎಂದು ಬರೆದಿದ್ದಾರೆ.
ಈ ವಿಡಿಯೋಗೆ ಶಾರುಖ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.ವಧು ಅದೃಷ್ಟಶಾಲಿ ಆದರೆ ಯಾರಾದರೂ ನನ್ನ ಕನಸನ್ನು ಬದುಕಿಸಬಾರದೆ, ಈ ಮದುವೆಯಲ್ಲಿ ಭಾಗವಹಿಸಲು ಶಾರೂಖ್ ಎಷ್ಟು ಹಣವನ್ನು ತೆಗೆದುಕೊಂಡಿರಬಹುದು, ಶಾರೂಖ್ ಕನಿಷ್ಠ 60 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಂಡಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ಅಮೃತಾ, ಅವರು ಫ್ಯಾಮಿಲಿ ಫ್ರೆಂಡ್ ಎಂದಿದ್ದಾರೆ.
ಶಾರೂಖ್ ಸದ್ಯ ಕಿಂಗ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಪುತ್ರಿ ಸುಹಾನಾ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆನಿಮೇಟೆಡ್ ಚಲನಚಿತ್ರ ಮುಫಾಸಾ: ದಿ ಲಯನ್ ಕಿಂಗ್‌ನಲ್ಲಿ ಮುಫಾಸಾ ಪಾತ್ರಕ್ಕೆ ಶಾರೂಖ್ ಖಾನ್ ಡಬ್ಬಿಂಗ್ ಮಾಡಿದ್ದಾರೆ. ಈ ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ.(ಏಜೆನ್ಸೀಸ್)