ನ್ಯೂಸ್

ರಹಸ್ಯವಾಗಿ ನೆರವೇರಿತಾ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಎಂಗೇಜ್​ಮೆಂಟ್? Rashmika

ನವದೆಹಲಿ: ಜನಪ್ರಿಯ ನಟರಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಮುಂದಿನ ವರ್ಷ ಫೆಬ್ರವರಿಯಲ್ಲಿ ವಿವಾಹವಾಗಲಿದ್ದಾರೆ ಎಂಬುದಾಗಿ ಇಂದು (ಅ.03) ಹಲವು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.

ಇವರಿಬ್ಬರೂ ಕೂಡ ಕಳೆದ ಕೆಲವು ವರ್ಷಗಳಿಂದ ಸಂಬಂಧದಲ್ಲಿದ್ದಾರೆ ಎನ್ನಲಾಗಿತ್ತು. ಈ ಹಿನ್ನೆಲೆ ಇಂದು ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ನಟರ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಹಾಜರಿದ್ದರು ಎಂದು ಹೇಳಲಾಗಿದೆ. ಎಂಗೇಜ್​ಮೆಂಟ್ ಫೋಟೋ ರಿವೀಲ್ ಆಗದಂತೆ ರಶ್ಮಿಕಾ ಹಾಗೂ ವಿಜಯ್​ ನೋಡಿಕೊಂಡಿದ್ದಾರೆ. ಹೈದರಾಬಾದ್​ನಲ್ಲಿರುವ ವಿಜಯ್ ನಿವಾಸದಲ್ಲಿ ಸೀಕ್ರೆಟ್ ನಿಶ್ಚಿತಾರ್ಥ ನಡೆದಿದ್ದು, ಮುಂದಿನ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಈ ಬಗ್ಗೆ ಇಬ್ಬರು ನಟರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಹಿಂದೆ 2017 ಜುಲೈ 03 ರಂದು ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಜೊತೆ ನಿಶ್ಚಿತಾರ್ಥವಾಗಿತ್ತು.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಗೀತ ಗೋವಿಂದಂ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಂದಿನಿಂದ, ಅವರ ನಡುವೆ ಉತ್ತಮ ಸಂಬಂಧ ಬೆಳೆದಿದೆ. ಇದಾದ ನಂತರ, ಪ್ರೇಮ ಪಕ್ಷಿಗಳು ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಪರದೆಯನ್ನು ಹಂಚಿಕೊಂಡರು. ಈ ಎರಡು ಚಿತ್ರಗಳೊಂದಿಗೆ ಅವರ ನಡುವೆ ಪ್ರೀತಿಯ ಉತ್ತಮ ಅಡಿಪಾಯ ಹಾಕಲಾಯಿತು ಎಂದು ವರದಿಯಾಗಿದೆ. ವಿಜಯ್ ಇತ್ತೀಚೆಗೆ ಕಿಂಗ್​ಡಮ್ ಚಿತ್ರದ ಮೂಲಕ ಮತ್ತೊಂದು ಹಿಟ್ ಗಳಿಸಿದ್ದರು. ಮತ್ತೊಂದೆಡೆ ರಶ್ಮಿಕಾ ದಕ್ಷಿಣ ಭಾರತೀಯ ಚಿತ್ರಗಳ ಜೊತೆಗೆ ಬಾಲಿವುಡ್ ಚಿತ್ರಗಳಲ್ಲು ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

(ಏಜೆನ್ಸೀಸ್)