ಬಾಲಿವುಡ್ನ ಕ್ಯೂಟ್ ಕಪಲ್ ರಣ್ಬೀರ್-ಆಲಿಯಾ ನಿನ್ನೆ ತಮ್ಮ ಮುದ್ದಾದ ಮಗಳು ರಾಹಾ ಜತೆಗೆ ನಿನ್ನೆ ಕ್ಯಾಮೆರಾಗೆ ಪೋಸ್ ಕೊಟ್ಟ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಾಹಾ ಈ ವಿಡಿಯೋದಲ್ಲಿ ಪಿಂಕ್ ಮತ್ತು ವೈಟ್ ಫ್ರಾಕ್ ಧರಿಸಿದ್ದು, ತಲೆಗೆ ಪಿಂಕ್ ಬಣ್ಣದ ಕ್ಲಿಪ್ಪನ್ನೂ ಹಾಕಲಾಗಿದೆ.
ನವೆಂಬರ್ 6, 2022 ರಂದು ರಾಹಾ ಜನಿಸಿದ್ದು, ಅಂದಿನಿಂದ ನಿನ್ನೆಯವರೆಗೂ ರಾಹಾಳನ್ನ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಕೊನೆಗೂ ರಾಹಾಳ ಜತೆ ರಣ್ಬೀರ್ ಮತ್ತು ಆಲಿಯಾ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ವರ್ಷಾಂತ್ಯದಲ್ಲಿ ಕಪೂರ್ ಕುಟುಂಬದ ಕ್ರಿಸ್ಮಸ್ ಲಂಚ್ ಗೆಟ್ ಟುಗೆದರ್ನಲ್ಲಿ ಮಗಳ ಜತೆ ಪೋಷಕರು ಮೀಡಿಯಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ.
ಸದ್ಯ ಫ್ಯಾನ್ಸ್ ನಡುವೆ ರಾಹಾ ಅಮ್ಮನನ್ನು ಹೋಲುತ್ತಾಳೆಯೋ ಅಥವಾ ಅಪ್ಪ ರಣ್ಬೀರ್ನನ್ನ ಹೋಲುತ್ತಾಳೆಯೋ ಎಂಬ ಚರ್ಚೆ ಶುರುವಾಗಿದೆ. ಇದರ ನಡುವೆ ವೈರಲ್ ಆದ ರಾಹಾ ಫೋಟೋನಲ್ಲಿ ಆಕೆ ಧರಿಸಿರುವ ಗುಲಾಬಿ ಕೂದಲಿನ ಕ್ಲಿಪ್‌ಗಳನ್ನು ಉಡುಗೊರೆಯಾಗಿ ನೀಡಿದ ಅಭಿಮಾನಿಯೊಬ್ಬರು ತಾವೇ ಈ ಗಿಫ್ಟ್ ಕೊಟ್ಟಿದ್ದು ಎಂದು ಟ್ವೀಟ್ ಮಾಡಿ ಖುಷಿ ಪಟ್ಟಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿದ ಅಭಿಮಾನಿ ರಾಹಾ ಹಾಕಿಕೊಂಡ ಗುಲಾಬಿ ಬಣ್ಣದ ಕ್ಲಿಪ್ಗಳನ್ನ ನಾನು ರಣ್ಬೀರ್ಗೆ ಪ್ರಮೋಷನ್ ಈವೆಂಟ್ ಒಂದರಲ್ಲಿ ಕೊಟ್ಟಿದ್ದೆ. ವೈರಲ್ ಆಗಿರುವ ಟ್ವೀಟ್ನಲ್ಲಿ ಒಂದೆಡೆ ಉಡುಗೊರೆಯಾಗಿ ನೀಡಿದ ಕ್ಲಿಪ್ನ ಫೋಟೋ ಮತ್ತು ರಾಹಾ ಆ ಕ್ಲಿಪ್ ಧರಿಸಿರುವ ಫೋಟೋವನ್ನ ಹಂಚಿಕೊಳ್ಳಲಾಗಿದೆ. ಇನ್ನು ಈ ಪೋಟೋಗೆ "ವಾವ್… ಬೇಬಿ ರಾಹಾ ನನ್ನ ಗಿಫ್ಟ್ ಹೇರ್ ಕ್ಲಿಪ್‌ಗಳನ್ನು ಧರಿಸಿದ್ದಾಳೆ'' ಅದೂ ಮೊದಲ ಬಾರಿ ಮೀಡಿಯಾ ಮುಂದೆ ಕಾಣಿಸಿಕೊಂಡಾಗಲೇ ಎಂದು ಖುಷಿ ಪಟ್ಟಿದ್ದಾರೆ.
ಪಿಂಕ್ ಮತ್ತು ವೈಟ್ ಫ್ರಾಕ್ ಧರಿಸಿರುವ ರಾಹಾಗೆ ವೈಟ್ ರಬ್ಬರ್ ಬ್ಯಾಂಡ್ನಿಂದ ಜುಟ್ಟು ಕಟ್ಟಿದ್ದಾರೆ. ಮಗಳು ”ರಾಹಾ” ಪಕ್ಕದಲ್ಲಿ ನಿಂತ ಆಲಿಯಾ ಮುಳದಲ್ಲಿ ಮಂದಹಾಸ ಮೂಡಿದೆ. ಸದ್ಯ ರಾಹಾ ಳನ್ನ ಮೊದಲ ಬಾರಿ ಕಂಡ ನೆಟ್ಟಿಗರು ಕ್ಯೂಟ್ ಬೇಬಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.ಬಾಲಿವುಡ್ನಲ್ಲಿ ಆಲಿಯಾ ಭಟ್ ಅವರು ಸಖತ್ ಬೇಡಿಕೆ ಹೊಂದಿದ್ದಾರೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಸಲ್ಲುತ್ತದೆ.