ಮುಂಬೈ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ವದಂತಿಗಳಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಜೋಡಿಗೆ 13 ವರ್ಷದ ಮಗಳು ಆರಾಧ್ಯ ಇದ್ದಾಳೆ. ಅಭಿಷೇಕ್ ಮತ್ತು ಐಶ್ವರ್ಯಾ ಬೇರೆಯಾಗಲು ಸಿದ್ಧರಾಗಿದ್ದಾರೆ ಎನ್ನುವ ವಂದತಿ ಹಬ್ಬಿದ ದಿನದಿಂದಲೂ ಈ ದಂಪತಿ ಹಿಂದೆ ಫ್ಯಾನ್ಸ್ ಬಿದ್ದು ಕಾರಣ ಹುಡುಕುತ್ತಿದ್ದಾರೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಗೆ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ ನಂತರ ಅವರ ವಿಚ್ಛೇದನದ ವದಂತಿಗಳು ಹಬ್ಬಿದ್ದವು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶ್ವೇತಾ ಬಚ್ಚನ್, ನವ್ಯಾ ನವೇಲಿ ನಂದಾ, ಮತ್ತು ಅಗಸ್ತ್ಯ ನಂದಾ ಸೇರಿದಂತೆ ಅಭಿಷೇಕ್ ತಮ್ಮ ಕುಟುಂಬದೊಂದಿಗೆ ಈವೆಂಟ್‌ಗೆ ಹಾಜರಾಗಿದ್ದರೆ, ಐಶ್ವರ್ಯಾ ತನ್ನ ಮಗಳೊಂದಿಗೆ ಬಂದಿದ್ದರು.
ವಿಚ್ಛೇದನದ ಎಲ್ಲಾ ವದಂತಿಗಳ ನಡುವೆ, ರೆಡ್ಡಿಟ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಭಿಷೇಕ್ ಐಶ್ವರ್ಯಾ ಅವರ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂದು ಪೋಸ್ಟ್ ಸೂಚಿಸುತ್ತದೆ.
ಹ್ಯಾಪಿ ನ್ಯೂ ಇಯರ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ದೀಪಿಕಾ ಪಡುಕೋಣೆ ಪಾತ್ರವನ್ನು ಐಶ್ವರ್ಯಾ ರೈಗೆ ನೀಡಲಾಗಿತ್ತಂತೆ. ಚಿತ್ರದಲ್ಲಿ ಶಾರುಖ್ ಖಾನ್ ಜತೆ ಪತ್ನಿ ನಟಿಸುವುದು ಅವರಿಗೆ ಇಷ್ಟವಿರಲಿಲ್ಲ. ಅಲ್ಲದೆ, ಶಾರುಖ್ ಖಾನ್ ಮತ್ತು ಐಶ್ವರ್ಯ ದೊಡ್ಡ ತಾರೆಗಳು ಮತ್ತು ನೆಚ್ಚಿನ ಜೋಡಿ. ದೋಸ್ತಾನಾದಲ್ಲಿ ಪ್ರಿಯಾಂಕಾ ಚೋಪ್ರಾ ಪಾತ್ರವನ್ನು ಐಶ್ವರ್ಯಾ ಮಾಡ ಬೇಕಿತ್ತು. ಅದನ್ನು ಕೂಡಾ ಐಶ್ ನಿರಾಕರಿಸಿದರು, ಅಭಿಷೇಕ್ಗೆ ಇದು ಇಷ್ಟವಾಗಿರಲಿಲ್ಲ, ಹೀಗಾಗಿ ಅವರು ಈ ಸಿನಿಮಾದಲ್ಲಿ ನಟಿಸಲಿಲ್ಲ ಎನ್ನಲಾಗಿದೆ ಎನ್ನುವ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ಅವರೊಂದಿಗಿನ ಈ ವಿಚ್ಛೇದನದ ವದಂತಿಗಳ ಬಗ್ಗೆ ತಮ್ಮ ಮೌನವನ್ನು ಮುರಿದರು ಎನ್ನುವುದನ್ನು ಉಲ್ಲೇಖಿಸಿದ ಹೇಳಿಕೆಯು ಹಳೆಯ ಸಂದರ್ಶನದಿಂದ ಬಂದಿದೆ. ಆದರೆ ಈ ಜೋಡಿ ಕುರಿತಾಗಿ ಎಲ್ಲೂ ಕೂಡಾ ಮಾತನಾಡಿಲ್ಲ.
ಅಭಿಷೇಕ್ ಕೊನೆಯದಾಗಿ ಆರ್ ಬಾಲ್ಕಿಯವರ ಘೂಮರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ರೆಮೋ ಡಿಸೋಜಾ ಅವರ ಬಿ ಹ್ಯಾಪಿ, ಸುಜೋಯ್ ಘೋಷ್ ಅವರ ಕಿಂಗ್ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಸಹ ನಟಿಸಿದ್ದಾರೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: II (2023) ಚಿತ್ರದಲ್ಲಿ ಐಶ್ವರ್ಯಾ ಕೊನೆಯದಾಗಿ ಕಾಣಿಸಿಕೊಂಡಿದ್ದರು.