ದಿಬ್ರುಗಢ್: ಆಸ್ಸಾಂನ ದಿಬ್ರುಗಢ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಪಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಯೂನಿವರ್ಸಿಟಿಯೇ ಪೊಲೀಸರಿಗೆ ದೂರು ನೀಡಿತ್ತು. ಸುಮಾರು 30 ವರ್ಷದ ಅಸಿಸ್ಟಂಟ್ ಪ್ರೊಫೆಸರ್ ಅಶ್ಲೀಲ ವೆಬ್ಸೈಟ್ಗಳಲ್ಲಿ ಸೆಕ್ಸ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದ ಎಂದು ಯೂನಿವರ್ಸಿಟಿ ದೂರಿನಲ್ಲಿ ಉಲ್ಲೇಖಿಸಿದೆ.
ಗಣಿತ ಕಲಿಸುತ್ತಿದ್ದ ಈ ಪ್ರೊಫೆಸರ್ನ ಸೆಕ್ಸ್ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ಮಹಿಳೆಯೋರ್ವರ ಜತೆ ಸೆಕ್ಸ್ ಮಾಡಿ ಆ ವಿಡಿಯೋವನ್ನು ಆತನೇ ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದ. ಆ ಬಗ್ಗೆ ಯೂನಿವರ್ಸಿಟಿಯಿಂದಲೇ ದೂರು ಬಂದಿತ್ತು. ನಾವು ಸಹಾಯಕ ಪ್ರಾಧ್ಯಾಪಕನ ಮನೆಯನ್ನು ರೇಡ್ ಮಾಡಿ, ಆತನ ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಾರಣೆ ವೇಳೆ ಆ ಪ್ರೊಫೆಸರ್ ತಾನು ವಿಡಿಯೋ ಅಪ್ಲೋಡ್ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದೀಗ ವೈರಲ್ ಆದ ವಿಡಿಯೋ ಮೂರು ವರ್ಷದ ಹಿಂದೆ ಗುವಾಹಟಿಯ ಹೋಟೆಲ್ವೊಂದರಲ್ಲಿ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದು ಎಂದು ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಹೀಗೆ ತಾನು ಲೈಂಗಿಕ ಕ್ರಿಯೆ ನಡೆಸುವುದನ್ನು ತನ್ನೊಂದಿಗೆ ಇರುವ ಮಹಿಳೆಯ ಗಮನಕ್ಕೆ ಬಾರದಂತೆ ವಿಡಿಯೋ ಮಾಡುತ್ತಿದ್ದ. ಆ ಕ್ಯಾಮರಾವನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಇರುವವಳು ಯೂನಿವರ್ಸಿಟಿಯ ಯಾವುದೇ ವಿದ್ಯಾರ್ಥಿನಿಯೂ ಅಲ್ಲ ಎಂದ ಆ ಶಿಕ್ಷಕ ಸ್ಪಷ್ಟಪಡಿಸಿದ್ದಾರೆ. ಆದರೂ ಇನ್ನೊಮ್ಮೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)