ನ್ಯೂಸ್

ವರ್ತಮಾನ ತಲ್ಲಣಗಳ ಕುರಿತು ಸಂವಾದ 25ಕ್ಕೆ

ಜಿ.ಹೆಚ್. ಧನ್ಯಕುಮಾರ್

ಚಿಕ್ಕಮಗಳೂರು: ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ನಿಂದ ವರ್ತಮಾನ ತಲ್ಲಣಗಳಿಗೆ ಬುದ್ಧ, ಬಸವ ಮಾರ್ಗ ವಿಚಾರ ಕುರಿತು ಸಾಹಿತಿ ನಟರಾಜ್ ಭೂದಾಳ್ ಅವರ ಜತೆಗೆ ಆ.25ರಂದು ಸಂಜೆ 5ಕ್ಕೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬಿಡು ತಿಳಿಸಿದರು.
ಸಮಾಜದಲ್ಲಿ ನಾನಾ ರೀತಿ ತಲ್ಲಣಗೊಳಿಸುವ ಪ್ರಕರಣಗಳು ಸಂಭವಿಸುತ್ತಿವೆ, ಮನುಕುಲ ಎಚ್ಚೆತ್ತುಕೊಳ್ಳಬೇಕಾಗಿದ್ದು, ಇದಕ್ಕೆ ಪೂರಕವಾಗಿ ಸಂವಾದ ಕಾರ್ಯಕ್ರಮಗಳು ನಡೆಯಬೇಕಾದ ಅಗತ್ಯವಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜದಲ್ಲಿ ಮನುಷ್ಯರು ಮನುಷ್ಯರನ್ನಾಗಿ ನೋಡುವ ಮನಸ್ಥಿತಿ ಇಲ್ಲವಾಗಿದೆ. ಬದುಕಿನ ಕಲೆ ಸರಿಯಾದ ದಾರಿಯಲ್ಲಿ ರೂಪಿಸಿಕೊಳ್ಳಬೇಕು. ಇದಕ್ಕೆ ಪೂರಕವಾದ ಚರ್ಚೆಗಳು, ಸಂವಾದ, ಚಿಂತನೆ ನಡೆಯಬೇಕಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಪ್ರಾಕೃತಿಕ, ಜಾಗತಿಕ, ಧಾರ್ಮಿಕ, ರಾಜಕೀಯ, ಸಾಮಾಜಿಕ ತಲ್ಲಣಗಳಿಂದ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮನುಷ್ಯನ ಸಮಾಜದಲ್ಲಿ ವಿವೇಕಯುತ ಎಚ್ಚರದ ಹೆಜ್ಜೆ ಇಡಬೇಕು. ಈ ತಲ್ಲಣಗಳು ನೆಲ ಸೀಮೆಗಳನ್ನು ಮೀರಿದ್ದು , ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂವಾದಗಳು ಅಗತ್ಯವಿದೆ. ಪ್ರಕೃತಿ ಮೇಲೆ ಮನುಷ್ಯ ನಡೆಸಿರುವ ದಬ್ಬಾಳಿಕೆಯಿಂದ ಪರಿಸರದಲ್ಲಿ ತಲ್ಲಣಗಳು ಸಂಭವಿಸುತ್ತಿವೆ ಎಂದರು.
ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಸಂವಾದದಲ್ಲಿ ಸಾಹಿತಿಗಳಾದ ವಿ.ಚಂದ್ರೇಗೌಡ, ರುದ್ರಸ್ವಾಮಿ, ಶಂಕರ್, ರುದ್ರಯ್ಯ ಭಾಗವಹಿಸಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗುರುಶಾಂತಪ್ಪ, ಮಂಜುನಾಥಸ್ವಾಮಿ, ವಿಜಯಕುಮಾರ್, ರಮೇಶ್ ಇದ್ದರು.